ಭಟ್ಕಳ : ಉತ್ತರ ಕನ್ನಡ ಜಿಲ್ಲೆಯು ಕರೋನ ಮುಕ್ತವಾಗಿರುವುದು ಸಂತೋಷದ ವಿಚಾರವದಾರೂ ಮುಂಜಾಗ್ರತಾ ಕ್ರಮವಾಗಿ ಇನ್ನೂ ಕೆಲವು ದಿನಗಳು ಲಾಕ್ ಡೌನ್ ನ್ನು ಮುಂದುವರೆಸುವುದು ಅನಿವಾರ್ಯವಾಗಿದೆ.
ಲಾಕ್ ಡೌನ್ ಘೋಷಣೆ ಆಗುವ ಪೂರ್ವದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಬರುವ ಕಡುಬಡವರು ಸಲ್ಲಿಸಿದ ಮುಖ್ಯಮಂತ್ರಿ ಪರಿಹಾರ ನಿಧಿಯ ಅರ್ಜಿದಾರರ ಅರ್ಜಿಗಳಿಗೆ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಚೆಕ್ ಗಳನ್ನು ಮಂಜೂರಾಗಿದ್ದು, ಲಾಕ್ ಡೌನ್ ಇರುವ ಕಾರಣ ಫಲಾನುಭವಿಗಳು ಚೆಕ್ ಸ್ವೀಕರಿಸಲು ಕಛೇರಿಗೆ ಬರುವುದು ಅಸಾಧ್ಯವೆಂಬುದನ್ನು ಅರಿತು, ಅಂತಹ ಫಲಾನುಭವಿಗಳ ಚೆಕ್ ಗಳನ್ನು ಅವರ ಮನೆಗಳಿಗೆ ಭೇಟಿ ನೀಡಿ ಚೆಕ್ ಅನ್ನು ಶಾಸಕ ಸುನೀಲ್ ನಾಯ್ಕ ತಲುಪಿಸಿದರು.
ಈ ಸಂದರ್ಭದಲ್ಲಿ ಫಲಾನುಭವಿಗಳ ಕುಟುಂಬ ನಿರ್ವಹಣೆಗೆ ಕೊಂಚಮಟ್ಟಿಗೆ ಇದು ಸಹಾಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚೆಕ್ ಪಡೆದವರ ಯಾದಿ.
ಹೊನ್ನಾವರ ತಾಲೂಕಿನ ಬಳ್ಕೂರು ತಲಗೋಡಿನ ಗಜಾನನ ನಾಯ್ಕ್ – 22,090 ರೂಪಾಯಿ
ಬಳಕೂರಿನ ಹಲಸಿನಡಿಕೇರಿಯ ವಿದ್ಯಾ ವಿವೇಕ್ ಪೈ – 5,977 ರೂಪಾಯಿ
ಹೊಸಪಟ್ಟಣ ಕಳಸನಮೋಟೆಯ ಗೋವಿಂದ ಚಂದ್ರು ಗೌಡ – 30000 ರೂಪಾಯಿ
ನಗರೆ ಮುಗ್ವಾದ ಪಾರ್ವತಿ ಗೋವಿಂದ ನಾಯ್ಕ – 8,740 ರೂಪಾಯಿ
ಮುಗ್ವಾದ ಪ್ರಸಾದ ವಿ ಹೆಗಡೆ – 61,055 ರೂಪಾಯಿ
ಹಡಿನಬಾಳದ ಶ್ರೀಮತಿ ಆನ್ ಡುಮಿಂಗ್ ಲೋಪೇಸ್ – 25000 ರೂಪಾಯಿ
ಹೊಸಪಟ್ಟಣ ಕಳಸನಮೋಟೆಯ ಗಾಯತ್ರಿ ಜಯಂತ ಗೌಡ – 8,558 ರೂಪಾಯಿ