ಕೊರೊನಾ ವೈರಸ್ ಹತೋಟಿಗೆ ತರುವ ನಿಟ್ಟಿನಲ್ಲಿ ಲಾಕ್ಡೌನ್ ಘೋಷಣೆಯಾದ ಬಳಿಕ ಮುಚ್ಚಿದ್ದ ಬಾರ್ಗಳು 50 ದಿನಗಳ ಬಳಿಕ ಮತ್ತೆ ಓಪನ್ ಆಗುತ್ತಿವೆ. ಬಾರ್ ತೆರೆಯಬೇಕು, ಪಾರ್ಸೆಲ್ ವ್ಯವಸ್ಥೆ ಮಾಡಬೇಕು ಎಂಬ ಕೂಗು ನಿತ್ಯದ್ದಾಗಿತ್ತು. ಜನರ ಒತ್ತಡಕ್ಕೆ ಮಣಿದ ಸರಕಾರ ಸೋಮವಾರದಿಂದ ಮದ್ಯ ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ರಾಜ್ಯ ಸರಕಾರ ಬೆಳಿಗ್ಗೆ 9 ಗಂಟೆಯಿಂದ 7 ರವರೆಗೆ ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಿದರೆ ಉತ್ತರಕನ್ನಡ ಜಿಲ್ಲೆಯಲ್ಲಿ ಅದನ್ನು ಬೆಳಿಗ್ಗೆ 9ರಿಂದ 1 ಗಂಟಗೆ ಸೀಮಿತಿಗೊಳಿಸಿದೆ. ಆದ್ದರಿಂದ ಬೆಳಿಗ್ಗೆ 5 ಗಂಟೆಯಿಂದಲೇ ಜನರು ಮದ್ಯದಂಗಡಿಗಳ ಮುಂದೆ ಕ್ಯೂ ನಿಂತ ದೃಶ್ಯ ಸಾಮಾನ್ಯವಾಗಿತ್ತು.
ಒಬ್ಬರಿಂದ ಒಬ್ಬರಿಗೆ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಐದಕ್ಕಿಂತ ಹೆಚ್ಚು ಜನರು ಸ್ಥಳದಲ್ಲಿ ಇರುವಂತಿಲ್ಲ ಸರಕಾರದ ಆದೇಶವನ್ನು ಜನರೂ ಕೂಡ ಪಾಲನೆ ಮಾಡುತ್ತಿದ್ದು ಮದ್ಯವನ್ನು ಪಾರ್ಸೆಲ್ ಕೊಂಡಯ್ಯಲು ಮಾತ್ರ ಅವಕಾಶ ನೀಡಲಾಗಿದೆ.