ದೇಶಕ್ಕೆ ದೇಶವೇ ಕೊರೋನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ಆಗಿದ್ದು, ನಾವೆಲ್ಲರೂ ಮನೆಯಲ್ಲಿಯೇ ಇದ್ದು ಕೊರೋನಾ ಸೋಂಕಿನ ನಿರ್ಮೂಲನೆಗೆ ಕಾಯುತ್ತಿದ್ದರೆ, ಕೆಲವು ಇಲಾಖೆಯ ಸಿಬ್ಬಂದಿಗಳು ತಮ್ಮ ಜೀವನವನ್ನೇ ಪಣಕ್ಕಿಟ್ಟು ಈ ಕೊರೋನಾ ನಿರ್ಮೂಲನೆಯಲ್ಲಿ ತೊಡಗಿದ್ದಾರೆ. ನಿಜವಾಗಿಯೂ ಅವರ ಕಾರ್ಯ ಅಭಿನಂದನಾರ್ಹವಾಗಿದೆ, ಅಂತಹವರಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಪ್ರಮುಖರು. ಇಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಅವರು ನಮ್ಮ ರಕ್ಷಣೆಯಲ್ಲಿ ತೊಡಗಿರುವಾಗ, ಅವರನ್ನು ನಾವು ನೆನೆಯಬೇಕಾಗಿದೆ.
ಅದರಂತೆಯೇ ಮುರೂರು-ಕಲ್ಲಬ್ಬೆ ಮತ್ತು ವಾಲಗಳ್ಳಿ-ಕೂಜಳ್ಳ್ಳಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರಿಗೆ (60 ಕ್ಕೂ ಹೆಚ್ಚು) ದಿ.ಮೋಹನ್ ಕೆ.ಶೆಟ್ಟಿ ಟ್ರಸ್ಟ್ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು..
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್ ನಾಯ್ಕ, ಪಂಚಾಯತ್ ಅಧ್ಯಕ್ಷರಾದ ಶೋಭಾ ನಾಯ್ಕ, ಮುಖಂಡರುಗಳಾದ ಹರೀಶ ಭಟ್, ರವಿ ಗೌಡ, ರಾಮ ನಾಯ್ಕ ಹನುಮಂತ ಪಟಗಾರ, ಮಂಜುನಾಥ ಗೌಡ, ಗಜಾನನ ನಾಯ್ಕ, ಸಂತೋಷ ನಾಯ್ಕ ಮನೋಜ ನಾಯಕ,ದತ್ತು ಶೆಟ್ಟಿ, ನಿತ್ಯಾನಂದ ನಾಯ್ಕ ಮುಂತಾದವರು ಹಾಜರಿದ್ದರು…