ಕುಮಟಾ : ಲಾಕ್ ಡೌನ್ ಪ್ರಾರಂಭ ಆದಾಗಿನಿಂದ ರಾಜ್ಯದ ಅನೇಕ ಕಡೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕರು ಅಲ್ಲಿಯೇ ಉಳಿಯುವಂತಾಗಿದೆ.. ಉಡುಪಿಗೆ ಕೆಲಸಕ್ಕೆ ತೆರಳಿದ್ದ ಕುಮಟಾ ಹೊನ್ನಾವರದ 7 ಹೆಣ್ಣು ಮಕ್ಕಳು ತಮ್ಮ ಕೆಲಸದ ಫ್ಯಾಕ್ಟರಿಯಲ್ಲಿಯೇ ಇರಬೇಕಾದ ಪರಿಸ್ಥಿತಿ ಬಂದಿತ್ತು.. ಅವರ ಪಾಲಕರು ತುಂಬಾ ಹೆದರಿ ಹೆಣ್ಣು ಮಕ್ಕಳನ್ನು ಕರೆಸಿಕೊಡುವಂತೆ ಶಾಸಕ ದಿನಕರ ಶೆಟ್ಟಿಯವರಲ್ಲಿ ಕೇಳಿಕೊಂಡಿದ್ದರು..
ಆದರೆ ಜಿಲ್ಲಾಧಿಕಾರಿಗಳು ನಿಯಮ ಪಾಲನೆ ಮಾಡಬೇಕಾಗಿದ್ದರಿಂದ ಸಹಜವಾಗಿ ನಿರಾಕರಿಸಿದ್ದರು..
ನಂತರ ಉಡುಪಿ ಹಸಿರು ಜೋನ್ ಗೆ ಬಂದ ನಂತರ ಅಲ್ಲಿಯ ಜಿಲ್ಲಾಧಿಕಾರಿ ಜಗದೀಶ ರೊಂದಿಗೆ ಮಾತನಾಡಿ ಅವರು ನಮ್ಮ ಜಿಲ್ಲೆಯ ಜಿಲ್ಲಾಧಿಕಾರಿ ಗಳೊಂದಿಗೆ ಚರ್ಚಿಸಿ ಆ 7 ಹೆಣ್ಣು ಮಕ್ಕಳನ್ನು ಸುರಕ್ಷಿತವಾಗಿ ಕುಮಟಾ ಕ್ಕೆ ಕರೆತಂದು ವೈದ್ಯಾಧಿಕಾರಿಗಳ ಮೂಲಕ ತಪಾಸಣೆ ನಡೆಸಿ ನಂತರ ಅವರವರ ಮನೆಗಳಿಗೆ ಕಳುಹಿಸಿ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ..