ಬೆಂಗಳೂರಿನಿಂದ ಉತ್ತರಕನ್ನಡ ಜಿಲ್ಲೆಗೆ ಪ್ರಯಾಣಿಸುವ ಜನರ ಬಹುಕಾಲದ ಬೇಡಿಕೆಯಾಗಿದ್ದ, ಉತ್ತರಕನ್ನಡ ಜಿಲ್ಲೆಗೆಂದೇ ಮೀಸಲಾದ ವಿಶೇಷ ರೈಲನ್ನು ಸಂಸದ ಶ್ರೀ ಅನಂತ್ ಕುಮಾರ್ ಹೆಗಡೆಯವರ ಮನವಿಗೆ ಸ್ಪಂದಿಸಿ ಕೇಂದ್ರ ರೈಲ್ವೆ ಮಂತ್ರಾಲಯ ಅನುಮೋದಿಸಿತ್ತು.ಯಶವಂತಪುರ-ಕಾರವಾರ-ಯಶವಂತಪುರ ಡೈಲೀ ಎಕ್ಸ್ ಪ್ರೆಸ್ ( YPR- KAWR-YPR Daily Express) ಈ ವಿಶೇಷ ರೈಲು (Train Number- 16595/16596) ಎರಡು ತಿಂಗಳ ಹಿಂದೆ ಅಂದರೆ ಮಾರ್ಚ್ 8 ನೇ ತಾರೀಕಿನಿಂದ ತನ್ನ ಸೇವೆ ಪ್ರಾರಂಭಿಸಿತ್ತು.

ಉತ್ತರಕನ್ನಡ ಜಿಲ್ಲೆ ಮತ್ತು ಬೆಂಗಳೂರಿನ ನಡುವೆ ಕ್ಷಿಪ್ರ ಪ್ರಯಾಣಕ್ಕಾಗಿ ಈ ರೈಲು ಮಂಗಳೂರು ಜಂಕ್ಷನ್ ರೈಲು ನಿಲ್ದಾಣ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಗಳಿಗೆ ಹೋಗದೆಯೇ ಪಡೀಲ್ ಬೈ ಪಾಸ್ ಮೂಲಕ ಸಂಚರಿಸುತ್ತಿತ್ತು, ಮತ್ತು ಇದರಿಂದಾಗಿ ಪ್ರಯಾಣಿಕರಿಗೆ ಸಾಕಷ್ಟು ಸಮಯ ಉಳಿತಾಯ ಆಗುತ್ತಿತ್ತು.

RELATED ARTICLES  ಅನಂತು v/s ನುಸ್ರತ್ ನಲ್ಲಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ನಯನ

ಆದರೆ ಈ ರೈಲಿಗೆ ಹೊನ್ನಾವರ ರೈಲು ನಿಲ್ದಾಣದಲ್ಲಿ ನಿಲುಗಡೆ ಇಲ್ಲದೇ ಇದ್ದುದರಿಂದ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು. ಹೊನ್ನಾವರದಲ್ಲಿ ಈ ರೈಲಿಗೆ ನಿಲುಗಡೆ ಒದಗಿಸಬೇಕೆಂದು ಸಂಸದ ಶ್ರೀ ಅನಂತಕುಮಾರ ಹೆಗಡೆಯವರು ಕೊಂಕಣ ರೈಲ್ವೆ ಕಾರ್ಪೊರೇಷನ್ ಗೆ ಪತ್ರ ಮುಖೇನ ವಿನಂತಿಸಿದ್ದರು. ಸಂಸದರ ಮನವಿಗೆ ತಕ್ಷಣ ಸ್ಪಂದಿಸಿದ ಕೊಂಕಣ ರೈಲ್ವೆ ಕಾರ್ಪೊರೇಷನ್ ನ ಚೇರ್ಮ್ಯಾನ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಶ್ರೀ ಸಂಜಯ್ ಗುಪ್ತಾ ಯಶವಂತಪುರ-ಕಾರವಾರ-ಯಶವಂತಪುರ ಡೈಲೀ ಎಕ್ಸ್ ಪ್ರೆಸ್ ರೈಲಿಗೆ ಹೊನ್ನಾವರದಲ್ಲಿ ನಿಲುಗಡೆ ಒದಗಿಸಿದ್ದಾರೆ. ಈ ಮೂಲಕ ಬೆಂಗಳೂರು ಮತ್ತು ಉತ್ತರ ಕನ್ನಡದ ಮಧ್ಯೆ ಸಂಚರಿಸುವ ಪ್ರಯಾಣಿಕರಿಗೆ ಆಗುತ್ತಿದ್ದ ತೊಂದರೆಯ ನಿವಾರಣೆ ಆಗಿದೆ.

RELATED ARTICLES  ಉತ್ತರಕನ್ನಡದಲ್ಲಿ ನಾಳಿನ ವ್ಯಾಕ್ಸಿನೇಶನ್ ವಿವರ ಇಲ್ಲಿದೆ