ಭಟ್ಕಳ: ಕರೋನಾ ಸೋಕಿತರೆಲ್ಲರೂ ಗುಣಮುಖರಾಗಿ ಉತ್ತರಕನ್ನಡಿಗರು ನಿರಾಳರಾಗಿದ್ದರು. ಅನೇಕ ದಿನಗಳಿಂದ ಸಕ್ರಿಯ ಕೊರೋನಾ ಸೋಂಕಿತ ಪ್ರಕರಣಗಳಿಲ್ಲದೆ ಸಹಜ ಸ್ಥಿತಿಯತ್ತ ಮರಳುತ್ತಿತ್ತು.
ಆದರೆ ಈಗ ಭಟ್ಕಳದ ಮತ್ತೊಂದು ಸೋಂಕು ಪಾಸಿಟಿವ್ ಬಂದಿದ್ದು ಜಿಲ್ಲೆಯ ಜನತೆ ಮತ್ತೆ ಆತಂಕಿತರಾಗುವ ಪರಿಸ್ಥಿತಿ ಬಂದಿದೆ.
ಪಟ್ಟಣದ 18 ವರ್ಷದ ಯುವತಿಯೊಬ್ಬಳಲ್ಲಿ ಕೋವಿಡ್- 19 ಸೋಂಕು ಪತ್ತೆಯಾಗಿದೆ. ಈಕೆ ಸೋಂಕು ತಗುಲಿ ಗುಣಮುಖರಾದವರವನ್ನು ಕ್ವಾರಂಟೈನ್ ನಲ್ಲಿ ಇಟ್ಟಿದ್ದ ಹೋಟೆಲ್ ಮಾಲೀಕರೊಬ್ಬರ ಪುತ್ರಿ ಎನ್ನಲಾಗಿದೆ. ಎರಡು ದಿನಗಳ ಹಿಂದೆ ಕೊರೋನಾ ಲಕ್ಷಣ ಕಾಣಿಸಿಕೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದ ಈಕೆ, ವೈದ್ಯರ ಶಿಫಾರಸ್ಸಿನ ಮೇಲೆ ಹೋಮ್ ಕ್ವಾರಂಟೈನ್ ಆಗಿದ್ದಳು. ಪ್ರಯೋಗಾಲಯಕ್ಕೆ ಗಂಟಲದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇಂದು ಬಂದ ಗಂಟಲಿನ ದ್ರವದ ಮಾದರಿಯ ವರದಿಯಲ್ಲಿ ಪಾಸಿಟಿವ್ ಬಂದಿದೆ.
ಮನೆಯಲ್ಲೇ ಇದ್ದ ಈಕೆ, ವಿದೇಶಕ್ಕೂ ಹೋಗಿಲ್ಲ, ವಿದೇಶದಿಂದ ಬಂದವರ ಸಂಪರ್ಕಕ್ಕೂ ಹೋಗಿರದ ಈಕೆಗೆ ಎಲ್ಲಿಂದ ಸೋಂಕು ಬಂತು ಎಂಬುದೇ ತಿಳಿಯದಾಗಿದೆ.