ಕಾರವಾರ: ಮಾತೃಭಾಷೆಗಿಂತ ಮಿಗಿಲಾದ ಭಾಂದವ್ಯವಿಲ್ಲ ಎಂದು ರಾಮಕೃಷ್ಣ ಆಶ್ರಮದ ಭವೇಶಾನಂದ ಸ್ವಾಮೀಜಿ ಹೇಳಿದರು.
ಸದಾಶಿವಗಡದಲ್ಲಿ ನಡೆದ ಕನ್ನಡ-ಕೊಂಕಣಿ ಮಾತೆ ಭಾವಚಿತ್ರ ನಮನ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾತೃಭಾಷೆಯನ್ನು ಬೆಳೆಸಿ, ರಕ್ಷಿಸುವದು ಪ್ರತಿಯೊಬ್ಬನ ಕರ್ತವ್ಯ ಎಂದು ಅವರು ಅಭಿಪ್ರಾಯ ಪಟ್ಟರು. ಉದ್ಯಮಿ ಜಾರ್ಜ ಫರ್ನಾಂಡಿಸ್, ಬಿಜೆಪಿ ಮುಖಂಡೆ ರೂಪಾಲಿ ನಾಯ್ಕ, ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ನಿಕಟಪೂರ್ವ ಕಸಾಪ ಅಧ್ಯಕ್ಷ ರಾಮಾ ನಾಯಕ, ಪ್ರಮುಕರಾದ ಸ್ಯಾಮಸನ್ ಡಿಸೋಜಾ, ವಸಂತ ಬಾಂದೇಕರ್, ಆರ್.ಪಿ ನಾಯ್ಕ ಇತರರಿದ್ದರು.