ಕುಮಟಾ ತಾಲೂಕಿನ ಪ್ರತಿಷ್ಠಿತ ಸಂಸ್ಥೆ ಕೊಂಕಣ ಎಜ್ಯುಕೇಶನ್ ಟ್ರಸ್ಟ್(ರಿ)ನ ಅಂಗ ಸಂಸ್ಥೆಗಳಾದ ಶ್ರೀ ರಂಗಾದಾಸ ಶಾನಭಾಗ ಹೆಗಡೆಕರ ಬಾಲಮಂದಿರದ LKG/UKG ತರಗತಿಗಳಿಗೆ ಹಾಗೂ ಸರಸ್ವತಿ ವಿದ್ಯಾಕೇಂದ್ರದಲ್ಲಿ 1ನೇ ತರಗತಿಯಿಂದ 7ನೇ ತರಗತಿಯವರೆಗೆ ಮತ್ತು ಸಿ.ವಿ.ಎಸ್.ಕೆ ಪ್ರೌಢಶಾಲೆಗೆ ಹೊಸದಾಗಿ ದಾಖಲಾತಿ ಬಯಸುವವರಿಗೆ ತಾತ್ಕಾಲಿಕ ಪ್ರವೇಶಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅವಕಾಶ ಕಲ್ಪಿಸಲಾಗಿದೆ.
ಈ ವರ್ಷದಿಂದ LKG ತರಗತಿಗೆ ಆಂಗ್ಲಮಾಧ್ಯಮದ ಅನುಮತಿ ದೊರೆತಿದ್ದು ಇಂಗ್ಲೀಷ್ ಹಾಗೂ ಕನ್ನಡ ಮಾಧ್ಯಮದ ಆಯ್ಕೆಗೆ ಅವಕಾಶ ಕಲ್ಪಿಸಲಾಗಿದೆ. ಒಂದನೇ ತರಗತಿಯಿಂದ 5ನೇ ತರಗತಿ ಕನ್ನಡ ಮಾಧ್ಯಮವಾಗಿದ್ದರೂ ಮುಂದಿನ ಆಂಗ್ಲ ಮಾಧ್ಯಮದ ದೃಷ್ಟಿಯಿಂದಲೇ ಅಗತ್ಯ ವಿಷಯಗಳು ಹಾಗೂ ಕೋರ್ ವಿಷಯಗಳು ಕನ್ನಡ ಹಾಗೂ ಆಂಗ್ಲ ಮಾಧ್ಯಮಗಳೆರಡರಲ್ಲೂ ನಡೆಯಲಿದೆ. 6 ನೇ ತರಗತಿಯಿಂದ ಪೂರ್ಣ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಇರಲಿದೆ.
ಲಾಕ್ ಡೌನ್ ಕಾರಣ ಶಾಲೆಗೆ ಬಂದು ಪ್ರವೇಶ (Admission) ಮಾಡಲು ಸಾಧ್ಯವಿಲ್ಲದ ಕಾರಣ ಆನ್ ಲೈನ್ ನಲ್ಲಿ ದಾಖಲಾತಿ ಮಾಡಲು ಅನುಕೂಲ ಕಲ್ಪಿಸಲಾಗಿದೆ.ಸಂಸ್ಥೆಯು ದಾಖಲಾತಿಗಾಗಿ ಅಧಿಕೃತವಾಗಿ ಆನ್ ಲೈನ್ ನಲ್ಲಿ ಫಾರಂ ನೀಡಿದ್ದು ಆ ಫಾರಂ ಅನ್ನು ತುಂಬುವ ಮೂಲಕ ತಾತ್ಕಾಲಿಕವಾಗಿ ದಾಖಲಾತಿಗೆ ಅವಕಾಶ ಕಲ್ಪಿಸಲಾಗಿದೆ. ಲಾಕ್ ಡೌನ್ ಮುಗಿದ ನಂತರದಲ್ಲಿ ಶಾಲಾ ಶುಲ್ಕ ಪಾವತಿ ಹಾಗೂ ಉಳಿದ ಅವಶ್ಯಕ ದಾಖಲೆ ಪತ್ರಗಳನ್ನು ನೀಡುವ ಮೂಲಕ ದಾಖಲಾತಿಯನ್ನು ಅಧಿಕೃತವಾಗಿ ಮಾಡಿಸಿಕೊಳ್ಳಲು ಸಂಸ್ಥೆ ನಿರ್ಧರಿಸಿದೆ.
ತಾತ್ಕಾಲಿಕ ಪ್ರವೇಶಾತಿ ಪಡೆಯಲು ಬಯಸುವವರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ತಾತ್ಕಾಲಿಕ ಪ್ರವೇಶಾತಿ ಫಾರಂ ಲಿಂಕ್ ಅನ್ನು ಪಸರಿಸಲಾಗಿದ್ದು ಅದರ ಮೂಲಕ ಅಥವಾ
ಗೂಗಲ್‍ನಲ್ಲಿ https://tinyurl.com/KONKANADMISSION
ಗೆ ಭೇಟಿ ನೀಡಿ ಪೂರ್ಣ ಮಾಹಿತಿಯೊಂದಿಗೆ ವಿವರಗಳನ್ನು ಭರ್ತಿಮಾಡುವಂತೆ ಹಾಗೂ ಅಗತ್ಯವಿದ್ದಲ್ಲಿ ಹೆಚ್ಚಿನ ಮಾಹಿತಿಗಾಗಿ 94815 88980 ಅಥವಾ 9449127279 ಗೆ ಸಂಪರ್ಕಿಸುವಂತೆ ಸಂಸ್ಥೆಯ ಆಡಳಿತ ಮಂಡಳಿಯವರು ವಿನಂತಿಸಿದ್ದಾರೆ.