ಸರಕಾರಿ ನೌಕರರ ಸಂಘ ಯಲ್ಲಾಪುರದ ವತಿಯಿಂದ #COVID19 ಮುಖ್ಯಮಂತ್ರಿಗಳ ಪರಿಹಾರ ನಿಧಿ ಇಂದು ಒಂದು ಲಕ್ಷ ರೂಪಾಯಿ ಚೆಕ್ ಅನ್ನು ಸಂಘದ ಅಧ್ಯಕ್ಷರು ಹಾಗೂ ಸದಸ್ಯರು ಸಚಿವ ಶಿವರಾಮ ಹೆಬ್ಬಾರ್ ಅವರ ಮೂಲಕವಾಗಿ ಹಸ್ತಾಂತರಿಸಿದರು.
ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿರುವ ಯಲ್ಲಾಪುರ ಸರಕಾರಿ ನೌಕರರ ಸಂಘದ ಸರ್ವ ಸದಸ್ಯರಿಗೆ ಹೃದಯ ಪೂರ್ವಕ ಅಭಿನಂದನೆಯನ್ನು ಸಚಿವರು ಸಲ್ಲಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ದಂಡಾಧಿಕಾರಿ ಡಿ.ಜಿ.ಹೆಗಡೆ, ಕಮಲಾಕರ ನಾಯ್ಕ, ಪ್ರಕಾಶ ನಾಯಕ, ಜಿ.ಎಮ್.ಭಟ್ ಹಾಗೂ ಸುಭಾಷ್ ನಾಯಕ ಸಂಘದ ಸದಸ್ಯರು ಹಾಜರಿದ್ದರು.
ಮುಖ್ಯಮಂತ್ರಿಗಳಪರಿಹಾರನಿಧಿ
Karnataka Varthe – ಕೊರೊನಾ ಮಾಹಿತಿ