ಕೊರೋನಾ ಎಂಬ ಮಾರಕ ಸೋಂಕು ಇಂದು ವಿಶ್ವವ್ಯಾಪ್ತಿ ಪಸರಿಸುತ್ತಿದೆ. ನಮ್ಮ ದೇಶವೂ ಕೂಡ ಇದರಿಂದ ಹೊರತಾಗಿಲ್ಲ. ಸರ್ಕಾರ ಲಾಕ್ಡೌನ್ ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಕೊರೋನಾ ನಿಯಂತ್ರಣಕ್ಕೆ ಕ್ರಮ ಕೈಗೊಂಡಿದೆ. ಅದೇ ರೀತಿ ಕೆಲವು ಇಲಾಖೆಯ ಸಿಬ್ಬಂದಿಗಳು ಇಂದು ಕೊರೋನಾ ನಿರ್ಮೂಲನೆಯಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ ಕಾರ್ಯನಿರ್ವಸಿಸುತ್ತಿದ್ದಾರೆ. ಇವರಲ್ಲಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಆರೋಗ್ಯ ಸಹಾಯಕಿಯರು ಪ್ರಮುಖರು. ಇಡೀ ದೇಶಕ್ಕೆ ದೇಶವೇ ಲಾಕ್ಡೌನ್ ನಿಂದ ಜನರೆಲ್ಲಾ ಮನೆಯಲ್ಲಿರುವ ಸಮಯದಲ್ಲಿ ಕೊರೋನಾ ವಾರಿಯರ್ಸ್ ಗಳು ಹಗಲು ಇರುಳೆನ್ನದೇ, ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನಮ್ಮೆಲ್ಲರ ರಕ್ಷಣೆಯಲ್ಲಿ ತೊಡಗಿದ್ದಾರೆ ತೊಡಗಿದ್ದಾರೆ. ಅವರ ಸೇವೆ ನಿಜವಾಗಿಯೂ ಅಭಿನಂದನಾರ್ಹವಾಗಿದೆ. ಅವರ ಕರ್ತವ್ಯಕ್ಕೆ ಸಹಕರಿಸುವುದರ ಜೊತೆಗೆ ಅವರನ್ನು ನೆನೆಯಬೇಕಾಗಿದೆ.
ಇಂದು ಕುಮಟಾ ತಾಲೂಕಿನ ದೇವಗಿರಿ ಹಾಗೂ ಕಲಭಾಗ ಪಂಚಾಯತ್ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಹಾಯಕಿಯರಿಗೆ(ಒಟ್ಟು 40 ಕ್ಕೂ ಜನರಿಗೆ) ದಿ.ಮೋಹನ್ ಕೆ.ಟ್ರಸ್ಟ ವತಿಯಿಂದ ಕ್ಷೇತ್ರದ ಮಾಜಿ ಶಾಸಕಿಯರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದಿನಸಿ ಸಾಮಗ್ರಿಗಳ ಕಿಟ್ ವಿತರಿಸಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಎಲ್.ನಾಯ್ಕ, ಪಂಚಾಯತ್ ಅಧ್ಯಕ್ಷರಾದ ಎಸ್. ಟಿ.ನಾಯ್ಕ, ಸಚಿನ ನಾಯ್ಕ, ನಾಗಪ್ಪ ಹರಿಕಂತ್ರ, ಸಂತೋಷ ನಾಯ್ಕ, ಮನೋಜ ನಾಯಕ, ನಿತ್ಯಾನಂದ ನಾಯ್ಕ, ದತ್ತು ಶೆಟ್ಟಿ ಮುಂತಾದವರು ಹಾಜರಿದ್ದರು…