ಭಟ್ಕಳ: ಮಂಗಳವಾರ ಯುವತಿಯಲ್ಲಿ ಕರೋನಾ ಪಾಸಿಟಿವ್ ಪ್ರಕರಣ ಈಗ ಉತ್ತರ‌ಕನ್ನಡದ ಜನತೆಗೆ ಭಯ ಹುಟ್ಟಿಸಿದೆ.

ಯುವತಿಯ ಕುಟುಂಬದ ಎಲ್ಲರಿಗೂ ಸೋಂಕು ತಗುಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಡಲಾರಂಭಿಸಿದೆ.

ವರದಿಗಾಗಿ ಕಳುಹಿಸಿದ್ದ ಸುಮಾರು ನೂರು ಸ್ಯಾಂಪಲ್ ಗಳಲ್ಲಿ 12 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂಬ ಸುದ್ದಿ ಇದೀಗ ಕಾಳ್ಗಿಚ್ಚಿನಂತೆ ಹರಡಿದ್ದು ಭಟ್ಕಳ ಸೇರಿ ಉತ್ತರ ಕನ್ನಡದ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ.

RELATED ARTICLES  "ಗೋಕರ್ಣ ಗೌರವ" 398ನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಸಿದ್ಧಾನಂದ ಸ್ವಾಮಿಗಳು

ಆದರೆ ಈ ಸುದ್ದಿ ಇನ್ನೂ ಅಧಿಕೃತವಾಗದಿದ್ದರೂ ಮಧ್ಯಾಹ್ನ 12ಕ್ಕೆ ರಾಜ್ಯ ಸರ್ಕಾರದ ಮೀಡಿಯಾ ಬುಲೆಟಿನ್ ಬಿಡುಗಡೆ ಮಾಡಲಿದ್ದು, ಅದರ ನಂತರವೇ ಎಷ್ಟು ಮಂದಿಗೆ ಸೋಂಕು ತಗುಲಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಆ ವರೆಗೆ ಜನತೆ ತಾಳ್ಮೆಯಿಂದ ಕಾಯುವಂತೆ ವಿನಂತಿಸಿದೆ.

RELATED ARTICLES  ಕಳೆದು ಹೋದ‌ ಎಳೆಯ ದಿನಗಳು (ಭಾಗ ೨೭)