ಭಟ್ಕಳ: ಕಡಿಮೆಯಾಗಿದ್ದ ಕೊರೋನಾ ಪ್ರಕರಣ ಭಟ್ಕಳದಲ್ಲಿ 22 ದಿನಗಳ ನಂತರ ಮಂಗಳವಾರ ಕಾಣಿಸಿಕೊಂಡಿದ್ದು, ಕರೋನಾ ಪಾಸಿಟಿವ್ ಪ್ರಕರಣ ಮತ್ತೊಮ್ಮೆ ಜನರನ್ನು ಬೆಚ್ಚಿ ಬೀಳಿಸಿತ್ತು. ಇಂದು ಆ ಸೋಂಕಿತರಿಂದ 12 ಜನರಿಗೆ ಸೋಂಕು ದೃಢವಾಗಿದೆ. ಸೋಂಕಿತರ ಸಂಪರ್ಕದಲ್ಲಿ ಬಂದಿದ್ದ ಸುಮಾರು 100 ಜನರ ಗಂಟಲು ದೃವ ಪರೀಕ್ಷೆಗೆ ನಿನ್ನೆ ಕಳಿಸಲಾಗಿತ್ತು.
ಇದೀಗ ಅದರ ವರದಿ ಬಂದಿದ್ದು ಸೋಂಕಿತ
ಕುಟುಂಬದವರೂ ಸೇರಿ 12 ಜನರಲ್ಲಿ ಸೋಂಕು ದೃಢವಾಗಿದೆ ಎನ್ನಲಾಗಿದೆ.
ಭಟ್ಕಳ ಮೂಲದ 12 ಮಂದಿಯಲ್ಲಿ ಕರೊನಾ ಸೋಂಕು ಇರುವುದು ಇಂದು ದೃಢಪಟ್ಟಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ. ಮೊನ್ನೆ ಕರೊನಾ ಪತ್ತೆಯಾಗಿದ್ದ ಯುವತಿಯ ಕುಟುಂಬದ ಹಾಗೂ ಅಕ್ಕಪಕ್ಕದ ಮನೆಯ ಆರು ಮಂದಿ, ಪಕ್ಕದ ಬೀದಿಯ ಓರ್ವ, ಹೆದ್ದಾರಿ ಬಳಿಯಲ್ಲಿ ಮನೆ ಹೊಂದಿರುವ ಓರ್ವನಿಗೆ ಹಾಗೂ ಇನ್ನೊಂದು ಬೀದಿಯ ೪ ಮಂದಿಗೆ ಸೋಂಕು ಕಾಣಿಸಿಕೊಂಡಿದೆ. 5 ತಿಂಗಳ ಹೆಣ್ಣುಮಗು, 3 ವರ್ಷದ ಬಾಲಕ, 83 ಹಾಗೂ 60 ವರ್ಷದ ವೃದ್ಧ, 75 ವರ್ಷದ ವೃದ್ಧೆ, 39 ವರ್ಷದ ಮಹಿಳೆ, 33 ಹಾಗೂ 30 ವರ್ಷದ ಪುರುಷ, 25, 22, 11 ಹಾಗೂ 12 ವರ್ಷದ ಯುವತಿಯರಲ್ಲಿ ಸೋಂಕು ದೃಢಪಟ್ಟಿದೆ. ಭಟ್ಕಳದ ಈ ಸೋಂಕಿತ ಯುವತಿಯ ಅಕ್ಕ, ಬಾವ ತಮ್ಮ ಮಗುವಿಗೆ ಅನಾರೋಗ್ಯದ ಕಾರಣ ಪಾಸ್ ಪಡೆದು ಮಂಗಳೂರಿಗೆ ಏ.19ಕ್ಕೆ ತೆರಳಿದ್ದರು. ಪರಿಚಯಸ್ಥರೊಬ್ಬರ ಮನೆಯಲ್ಲಿ ಉಳಿದು, ಏ.20ರಂದು ಮಗುವಿಗೆ ಚಿಕಿತ್ಸೆ ಕೊಡಿಸಿ ಭಟ್ಕಳಕ್ಕೆ ವಾಪಸ್ಸಾಗಿದ್ದರು. ಹೀಗಾಗಿ ಇವರ ಸಂಪರ್ಕದಲ್ಲಿದ್ದ ಯುವತಿಗೆ ಸೋಂಕು ಹರಡಿದೆ..
ವರದಿಗಾಗಿ ಕಳುಹಿಸಿದ್ದ ಸುಮಾರು ನೂರು ಸ್ಯಾಂಪಲ್ ಗಳಲ್ಲಿ 12 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ ಎಂಬ ಸುದ್ದಿ ಇದೀಗ ಕಾಳ್ಗಿಚ್ಚಿನಂತೆ ಹರಡಿದ್ದು ಭಟ್ಕಳ ಸೇರಿ ಉತ್ತರ ಕನ್ನಡದ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ.
ರಾಜ್ಯ ಸರ್ಕಾರದ ಮೀಡಿಯಾ ಬುಲೆಟಿನ್ ಬಿಡುಗಡೆ ಮಾಡಿದ್ದು ಅದರಲ್ಲಿ ಪೂರ್ಣ ಮಾಹಿತಿ ಹೊರಬಂದಿದೆ. ಮುಂದಿನ ನಡೆ ಹೇಗೆ ಇರಲಿದೆ ಎಂಬ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಬೇಕಿದೆ.