ಇಂದು ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಹೊಸದಾಗಿ 12 ಪ್ರಕರಣಗಳು ಪತ್ತೆಯಾಗಿರುವುದು ಗ್ರೀನ್ ಝೋನ್ನತ್ತ ಸಾಗುತ್ತಿದ್ದ ನಮ್ಮ ಜಿಲ್ಲೆಯ ಜನರಲ್ಲಿ ಸ್ವಲ್ಪ ಆತಂಕ ಸ್ರಷ್ಟಿಸಿದೆ ಹಾಗೂ ಜಿಲ್ಲೆಯ ಜನತೆ ಯಾವುದೇ ರೀತಿಯ ಗಾಬರಿ ಪಡದೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆಯಿದೆ. ಎಂದು ಉಸ್ತುವಾರಿ ಸಚಿವ ಹೆಬ್ಬಾರ್ ತಿಳಿಸಿದ್ದಾರೆ.
ಯಾವುದೇ ಪರಿಸ್ಥಿತಿಯನ್ನು ಎದುರಿಸಲು, ಜಿಲ್ಲೆಯ ಜನರಿಗೆ ಎಲ್ಲ ಅವಶ್ಯಕ ಆರೋಗ್ಯ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತದ ತಂಡ ಸರ್ವ ಸನ್ನದ್ದವಾಗಿದೆ.
ಇಂದು ಶ್ರೀ ಯಡಿಯೂರಪ್ಪ ನೇತ್ರತ್ವದ ರಾಜ್ಯ ಸರ್ಕಾರ, ಜಿಲ್ಲಾಡಳಿತ, ಪೋಲಿಸ್, ವೈದ್ಯಕೀಯ ಸಿಬ್ಬಂದಿ, ಆಶಾ , ಅಂಗನವಾಡಿ ಕಾರ್ಯಕರ್ತರು ಕಳೆದ 2 ತಿಂಗಳಿಂದ ತಮ್ಮ ಜೀವದ ಹಂಗುತೊರೆದು ದೇಶಸೇವೆಯಲ್ಲಿ ತೊಡಗಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬ ನಾಗರಿಕರು ಪ್ರಾಮಾಣಿಕವಾಗಿ ತಮ್ಮ ಮಾಹಿತಿಯನ್ನು ಹಂಚಿಕೊಳ್ಳವುದು ಕಡ್ಡಾಯ ಹಾಗೂ ರೋಗ ಲಕ್ಷಣಗಳನ್ನು ಮುಚ್ಚಿಡುವುದು ಮತ್ತು ಇತರರಿಗೆ ಹರಡುವುದು ಕ್ರಿಮಿನಲ್ ಅಪರಾಧವಾಗಿದೆ.
ಭಟ್ಕಳದಲ್ಲಿ ಕೆಲವೊಂದು ಪ್ರಕರಣಗಳನ್ನು ಪರಿಶೀಲಿಸಿದಾಗ, ಕೆಲವರು ರೋಗದ ಲಕ್ಷಣಗಳು ಇದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತದಿಂದ ಮಾಹಿತಿ ಮುಚ್ಚಿಟ್ಟು ಸ್ವಯಂ ಔಷಧಿ ಮಾಡಿಕೊಳ್ಳುತ್ತರುವ ಬಗ್ಗೆ ಗುಮಾನಿಯಿದೆ, ಈ ರೀತಿ ಮಾಡುವುದು ರೋಗಿಗಳಿಗೂ ಮಾರಕವಲ್ಲದೆ, ಅವರ ಸಂಪರ್ಕಕ್ಕೆ ಬರುವ ಹಲವಾರು ಜನರಿಗೆ ಹಬ್ಬುವ ಸಾದ್ಯತೆ ಹೆಚ್ಚಾಗಿರುತ್ತದೆ ಹಾಗೂ ಅದರ ಪರಿಣಾಮವನ್ನು ಇಡೀ ಸಮಾಜವೇ ಎದುರಿಸಬೇಕಾಗುತ್ತದೆ.
ಈ ಬಗ್ಗೆ ಶೀಘ್ರವಾಗಿ ಜಿಲ್ಲಾಡಳಿತದಿಂದ ಪರಿಶೀಲನೆ ನಡೆಸಲು ತಿಳಿಸಿದ್ದೇನೆ, ಒಂದುವೇಳೆ ಅಂತಹ ಪ್ರಕರಣ ಕಂಡುಬಂದಲ್ಲಿ ಅವರ ಮೇಲೆ ಹಾಗೂ ಅವರಿಗೆ ಸಹಕರಿಸಿದವರ ಮೇಲೆ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ.