ಭಟ್ಕಳ : ಉತ್ತರಕನ್ನಡ ಜಿಲ್ಲೆಯ ಭಟ್ಕಳ ಇದೀಗ ಮತ್ತೆ ಏಳು ಮಂದಿಯಲ್ಲಿ ಕೊರೋನಾ ಪಾಸಿಟಿವ್ ಪತ್ತೆ ಆಗಿರುವ ಬಗ್ಗೆ ವರದಿ ಬಂದಿದ್ದು ಜನತೆ ಮತ್ತೆ ಬೆಚ್ಚಿ ಬಿದ್ದಿದೆ.
ನಿನ್ನೆಯಷ್ಟೆ 12ಜನರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿದ್ದು, ಇದೀಗ ಅದೇ ಕುಟುಂಬದ 7 ಜನರಲ್ಲಿ ಮತ್ತೆ ಸೋಂಕು ಇರುವುದು ದೃಢವಾಗಿದೆ.
ಎರಡೆ ದಿನದಲ್ಲಿ ಸೋಂಕಿತರ ಸಂಖ್ಯೆ 19 ಕ್ಕೆ ಏರಿಕೆ ಆದಂತಾಗಿದೆ. ಈ ಹಿಂದೆ 12 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಅವರೆಲ್ಲರೂ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದರು. ಒಟ್ಟು ಇಂದಿನ 7 ಸೇರಿಸಿ ಇದುವರೆಗೆ ಭಟ್ಕಳ ಒಂದರಲ್ಲೆ 32 ಜನರಲ್ಲಿ ಕೊರೋನಾ ಪಾಸಿಟಿವ್ ಪತ್ತೆಯಾಗಿರುವಂತಾಗಿದೆ.
ಒಂದೂವರೆ ವರ್ಷದ ಬಾಲಕಿ, ಎರಡು ವರ್ಷ ಆರು ತಿಂಗಳ ಬಾಲಕಿ, 17, 23 ವರ್ಷದ ಯುವತಿ, 65, 68 ವರ್ಷದ ವೃದ್ಧ ಹಾಗೂ 50 ವರ್ಷದ ವೃದ್ಧೆಯಲ್ಲಿ ಸೋಂಕು ದೃಢಪಟ್ಟಿದೆ. ಸದ್ಯ ಇಂದು ದೃಢಪಟ್ಟವರು ನಗರದ ಹೃದಯ ಭಾಗದ ಓಣಿಯಲ್ಲಿದ್ದವರು ಎನ್ನಲಾಗಿದ್ದು, ಇದು ಮತ್ತಷ್ಟು ಆತಂಕ ಸೃಷ್ಟಿಗೆ ಕಾರಣವಾಗಿದೆ.
ಫ್ಟಸ್ ನ್ಯೂರೋ ಆಸ್ಪತ್ರೆಗೆ ಹೋಗಿ 18ವರ್ಷದ ಯುವತಿ ಬಂದ್ದ ಕೇಸ್ 659 ರಿಂದಲೇ ಇದುವರೆಗೆ 19 ಜನರಿಗೆ ಕೊರೋನಾ ಸೋಂಕು ತಲುಗಿದಂತಾಗಿದೆ. ಇನ್ನೂ 56 ಜನರ ಗಂಟಲ ಹಾಗೂ ರಕ್ತಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಮತ್ತಷ್ಟು ಜನರ ವರದಿ ಕೈ ಸೇರಬೇಕಿದೆ.
ಈಗಾಗಲೆ ಭಟ್ಕಳದಲ್ಲಿ ಕೊರೋನಾ ಸೋಂಕಿತರು ಹೆಚ್ಚಾಗುತ್ತಿರುವ ಕಾರಣಕ್ಕೆ ಪಟ್ಟಣದ ಅನೇಕಕಡೆ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದೆ.