ಹೊನ್ನಾವರ : ತಾಲೂಕಿನ ಗುಂಡಿಬೈಲ್ – ಜನಕಡ್ಕಲ್ ರಸ್ತೆಯು ಆ ಬಾಗದ ಜನರ ಹಲವು ವರ್ಷಗಳ ಬೇಡಿಕೆಯಾಗಿತ್ತು. ಕಾಮಗಾರಿ ಪ್ರಾರಂಭಕ್ಕೂ ಮುನ್ನ ಅತಿ ಹೆಚ್ಚು ಚರ್ಚೆಗೆ ಕಾರಣವಾಗಿತ್ತು. ಆದ್ದರಿಂದ ರಸ್ತೆ ಕಾಮಗಾರಿಯ ಪ್ರಾರಂಭದಲ್ಲೇ ಸಂಭಂದಿಸಿದ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಈ ರಸ್ತೆಯ ಬಗ್ಗೆ ಅತಿ ಹೆಚ್ಚು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿತ್ತಾದರು ರಸ್ತೆ ಕಾಮಗಾರಿಯ ಬಗ್ಗೆ ಕೆಲವರಿಂದ ಅಪಸ್ವರ ಕೇಳಿ ಬಂದ ಕಾರಣ ಸ್ಥಳಕ್ಕೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಶಾಸಕ ಸುನೀಲ್ ನಾಯ್ಕ ಭೇಟಿ ನೀಡಿ ಪರಿಶೀಲಿಸಿದರು.

RELATED ARTICLES  ಡಾ. ಅಶೋಕ ಭಟ್ಟ ಹಳಕಾರ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಆಗ್ರಹ.

ಕಾಮಗಾರಿಯು 2 ಕೋಟಿ ರೂಪಾಯಿ ವೆಚ್ಚದಲ್ಲಿ ಅಂದಾಜು ಪತ್ರಿಕೆಯ ಪ್ರಕಾರವಾಗಿಯೆ ನಡೆಯುತ್ತಿದ್ದು, ರಸ್ತೆ ನಿರ್ಮಾಣದಲ್ಲಿ ಯಾವುದೆೇ ವ್ಯತ್ಯಾಸವಾದ ಹಾಗೆ ಎಚ್ರ ವಹಿಸುವಂತೆ ಸೂಚಿಸಲಾಯಿತು. ಈ ರಸ್ತೆ ಆಯ್ದ ಭಾಗಗಳಲ್ಲಿ ಕಾಂಕ್ರೆಟೀಕರಣ ಮತ್ತು ಆಯ್ದ ಭಾಗಗಳಲ್ಲಿ ಮರುಡಾಂಬರೀಕರಣ ಹಾಗೂ ಹೊಸದಾಗಿ ಡಾಂಬರೀಕರಣ ಮಾಡುವಂತೆ ಅಂದಾಜು ಪತ್ರಿಕೆಯಲ್ಲಿರುತ್ತದೆ.

RELATED ARTICLES  ಟ್ಯಾಂಕರ್ ಹಾಗೂ ಬೈಕ್ ನಡುವೆ ಮುಖಾಮುಖಿ ಡಿಕ್ಕಿ : ಇಬ್ಬರ ಸಾವು

ರಸ್ತೆ ಕಾಮಗಾರಿಯಲ್ಲಿ ಏನಾದರು ವ್ಯತ್ಯಾಸ ಕಂಡುಬಂದಲ್ಲಿ ಅಂದಾಜು ಪತ್ರಿಕೆಯನ್ನು ಪಡೆದು ಅದರಂತೆ ಕಾಮಗಾರಿಯನ್ನು ನೆರವೆರಿಸಿಕೊಳ್ಳುವ ಸಂಪೂರ್ಣ ಅಧಿಕಾರ ಸ್ಥಳೀಯರಿಗೆ ಇರುತ್ತದೆ. ನಿಮ್ಮ ರಸ್ತೆ ನಿಮ್ಮ ಹಕ್ಕಾಗಿದೆ. ಏನಾದರು ವ್ಯತ್ಯಾಸ ಕಂಡುಬಂದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಎಂದು ಶಾಸಕರು ತಿಳಿಸಿದ್ದಾರೆ.