ಭಟ್ಕಳ: ಪಟ್ಟಣದ ಮತ್ತೋರ್ವ ಮಹಿಳೆಗೆ ಕೊರೋನಾ ಸೋಂಕು ಪಾಸಿಟೀವ್ ಬಂದಿದ್ದು ಇದೀಗ 32 ವರ್ಷದ ಮಹಿಳೆಗೆ ಸೋಂಕು ತಗುಲಿರುವುದು ದೃಢಪಟ್ಟಿರುವುದನ್ನ ಖಚಿತ ಪಡಿಸಲಾಗಿದೆ. ಮಹಿಳೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದು ಇದೀಗ ಮಹಿಳೆಗೂ ಸೋಂಕು ದೃಢಪಟ್ಟಿದೆ‌.

RELATED ARTICLES  ರಾಹುಲ್ ಗಾಂಧಿ ಆಗಮನಕ್ಕೆ ಸಜ್ಜಾಗಿದೆ ಭಟ್ಕಳ: ನಡೆಯಲಿದೆ ಬ್ರಹತ್ ಸಮಾವೇಶ

ಇಂದು ಬೆಳಿಗ್ಗಿನ ಬುಲೆಟಿನ್ ನಲ್ಲಿ 7 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಇದೀಗ ಇನ್ನೋರ್ವಳಿಗೆ ದೃಡಪಟ್ಟಿದ್ದು ಒಟ್ಟೂ ಸಕ್ರಿಯ ಸೋಂಕಿತರ ಸಂಖ್ಯೆ 21ಕ್ಕೆ ಏರಿದಂತಾಗಿದೆ.

RELATED ARTICLES  ಶಿರಸಿ ತಾ ಪಂ ಗೆ ಯಾವಾಗ ಹೊಸ ಕಟ್ಟಡ ಭಾಗ್ಯ ಸಿಗುವುದೋ?

ಕಳೆದ ಮಂಗಳವಾರ ಸೋಂಕು ಕಾಣಿಸಿಕೊಂಡಿದ್ದ ಯುವತಿಯ ಕುಟುಂಬದವಳೇ ಈಕೆಯಾಗಿದ್ದು ಸೋಂಕಿತ ಮಹಿಳೆ ಕುಟುಂಬದ 8 ಜನರಿಗೆ ಹಾಗೂ ಕುಟುಂಬದ ಸಂಪರ್ಕದಲ್ಲಿದ್ದ 4ಜನರಿಗೆ ನಿನ್ನೆ ಸೋಂಕು ಧೃಡಪಟ್ಟಿತ್ತು.