ಬೆಳಗಾವಿಯಲ್ಲಿ ನಡೆದ ಲಿಂಗಾಯತ ಧರ್ಮ ಬೇಡಿಕೆ ಸಮಾವೇಶ ನಿಜವಾಗಿಯೂ ಸಮಾಜದ ಸಮಾವೇಶ ಎಂದು ಸಚಿವ ಆರ್. ವಿ. ದೇಶಪಾಂಡೆ ಪ್ರತಿಕ್ರಿಯಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸಮಾವೇಶ ಎನ್ನುವ ಸಂಸದ ಸುರೇಶ ಅಂಗಡಿ ಅವರ ಮಾತು ಸ್ವೀಕಾರಾರ್ಹವಲ್ಲ.‌ ಲಿಂಗಾಯತ ಧರ್ಮ ಬೇಡಿಕೆಯ ಅವರ ಸಮಾವೇಶ ‘ಲಿಂಗಾಯತ ಸಮಾಜದ’ ಸಮಾವೇಶವಾಗಿತ್ತು. ಅದು ಹೇಗೆ ಕಾಂಗ್ರೆಸ್ ಸಮಾವೇಶ ಆಗುತ್ತದೆ? ಲಿಂಗಾಯತ ಸಮಾಜದ ಬೇಡಿಕೆಯನ್ನು ರಾಜಕೀಯವಾಗಿ ಬಿಂಬಿಸಬಾರದು ಎಂದು ಸಲಹೆ ನೀಡಿದರು. ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಲಕ್ಕನ್ನ ಸವಸುದ್ದಿ ಇದ್ದರು.

RELATED ARTICLES  ತಮ್ಮ ಸ್ವಂತ ಖರ್ಚಿನಲ್ಲಿ ಉಚಿತ ಆಂಬ್ಯುಲೆನ್ಸ ಸೇವೆ ಒದಗಿಸುತ್ತಿರುವ ಕುಮಟಾ ಶಾಸಕ ದಿನಕರ ಶೆಟ್ಟಿ