ಭಟ್ಕಳ: ಕಳೆದೆರಡು ದಿನದಿಂದ ಜನತೆಯಲ್ಲಿ ಭಯ ಹುಟ್ಟಿಸಿದ್ದ ಕೊರೋನಾ ಸುದ್ದಿ ಇಂದು ಕೊಂಚ ರಿಲ್ಯಾಕ್ಸ ನೀಡಿದೆ.
ಜನತೆ ಇಂದು ನಿಟ್ಟುಸಿರು ಬಿಡುವಂತಹ ಸುದ್ದಿಯಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊರಡಿಸಿರುವ ಹೆಲ್ತ್ ಬುಲೆಟಿನ್ ನಲ್ಲಿ ಇಂದು ಒಂದೇ ಒಂದು ಪ್ರಕರಣ ಜಿಲ್ಲೆಯಲ್ಲಿಲ್ಲ ಎಂಬುದು ಜನತೆಯಲ್ಲಿ ನಿಟ್ಟುಸಿರು ಬಿಡಲು ಕಾರಣವಾಗಿದೆ.
ಇಂದು ಭಟ್ಕಳದಲ್ಲಿ ಹೆಚ್ಚು ಪ್ರಕರಣ ಪತ್ತೆಯಾಗಿದೆ ಎಂದು ಸುದ್ದಿಗಳೂ ಹರಿದಾಡಿದ್ದವು. ಇದೀಗ ಅಧಿಕೃತ ಮಾಹಿತಿ ಹೊರಬಂದಿದ್ದು ಯಾರೂ ಸುಳ್ಳುಸುದ್ದಿಗಳಿಗೆ ಕಿವಿಗೊಡದಂತೆ ಜಿಲ್ಲಾಡಳಿತ ವಿನಂತಿಸಿದೆ.