ಹೆಗಡೆ ಮುಖ್ಯ ರಸ್ತೆ ಗಣಪತಿ ದೇವಸ್ಥಾನ ದಿಂದ ಹೆಗಡೆ ಪೇಟೆ ತನಕ ಡಾಂಬರ್ ರಸ್ತೆ ನಂತರ ಹೆಗಡೆ ಪೇಟೆ ಯಲ್ಲಿ ದೇವಸ್ಥಾನದ ತನಕ ಕಾಂಕ್ರೀಟ್ ರಸ್ತೆ ಕಾಮಗಾರಿಯನ್ನು ಶಾಸಕ ದಿನಕರ ಶೆಟ್ಟಿ ವೀಕ್ಷಣೆ ಮಾಡಿ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರಿಗೆ ಸೂಚಿಸಿದರು.


ಒಂದು ಕೋಟಿ ರೂಪಾಯಿ ಹೆಗಡೆ ರಸ್ತೆ ಗೆ ಸೆಂಕ್ಷನ್ ಮಾಡಿಸಿದ್ದು ಹೆಗಡೆ ಊರಿನ ಜನರಿಗೆ ಉತ್ತಮ ಅಗಲವಾದ ರಸ್ತೆ ನಿರ್ಮಾಣ ಆಗಲಿದೆ ಎಂದು ಸಂತಸ ವ್ಯಕ್ತಪಡಿಸಿದರು

RELATED ARTICLES  ಗೋಕರ್ಣದಲ್ಲಿ 'ಯಾಮಪೂಜೆ' ಸಂಪನ್ನ

ಇದೇ ಸಂದರ್ಭದಲ್ಲಿ ಮುಖ್ಯರಸ್ತೆಗೆ ಹೊಂದಿಕೊಂಡಿರುವ ಕರೆಂಟ್ ಕಂಬಗಳನ್ನು ಹಿಂದಕ್ಕೆ ಹಾಕಿ ರಸ್ತೆ ಮಾಡಲು ಅನುಕೂಲ ಮಾಡಿಕೊಡುವಂತೆ ವಿದ್ಯುಚ್ಚಕ್ತಿ ನಿಗಮದ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಅವರಿಗೆ ಸೂಚಿಸಿದರು… ಹಾಗೂ ಹೆಗಡೆ ಪಂಚಾಯಿತಿ ಪಿಡಿಒ ಶಿವಾನಂದ ಜೋಶಿ ರವರಿಗೂ ಕೆಲವೊಂದು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಸೂಚನೆ ನೀಡಿದರು.

RELATED ARTICLES  ಚುನಾವಣೆಗೆ ನಡೆದಿದ್ದೆ ಸಿದ್ಧತೆ: ಉತ್ತರಕನ್ನಡದಲ್ಲಿ ಅಧಿಕಾರಿಗಳು ಜಾಗ್ರತಿವಹಿಸಲು ಸೂಚನೆ


ವಿನೋದ ಪ್ರಭು, ಬಿಜೆಪಿ ಜಿಲ್ಲಾ ಅಧ್ಯಕ್ಷ ವೆಂಕಟೇಶ ನಾಯಕ, ಯೋಗೀಶ್ ಪಟಗಾರ, ವೆಂಕಟೇಶ ನಾಯ್ಕ, ಮೋಹನ ಶಾನಭಾಗ, ಸದಸ್ಯ ರಾಜು ಮುಕ್ರಿ, ವಿವೇಕ ವೆರ್ಣೇಕರ, ಶ್ರೀಧರ್ ಗೌಡ ಹಾಗೂ ಇತರರು ಉಪಸ್ಥಿತರಿದ್ದರು