ಕಳೆದ ಒಂದೂವರೆ ತಿಂಗಳಿಂದ ಕರೋನಾ ಮಹಾಮಾರಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು ದುಡಿಮೆ ಮಾಡಲು ಸಾಧ್ಯವಾಗದೇ ಇರುವ ಪರಿಸ್ಥಿತಿ ನಿರ್ಮಾಣವಾಗಿದ್ದು ಭಟ್ಕಳ ತಾಲೂಕಾ ಬೆಂಗ್ರೆ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 600 ಕುಟುಂಬಗಳಿಗೆ ಮಾಜಿ ಶಾಸಕ ಮಂಕಾಳ ವೈದ್ಯ ದೇವಾಡಿಗ ಸಮಾಜದ ಸಭಾಭವನದಲ್ಲಿ ದಿನಸಿ ಕಿಟ್ ಗಳನ್ನ ವಿತರಣೆ ಮಾಡಿ ಬಡವರ ಕಷ್ಟಗಳಿಗೆ ನೆರವಾಗಿದ್ದಾರೆ.