ಕಾರವಾರ: ಇಲ್ಲಿನ ಕ್ರಿಮ್ಸ್ ನಲ್ಲಿ ಕ್ವಾರಂಟೈನ್ ಅಲ್ಲಿ ಇರುವವರೊಂದಿಗೆ ” ವಿಡಿಯೋ ಸಂವಾದ ” ನಡೆಸಿ ಆರೋಗ್ಯ ಇಲಾಖೆ ನೀಡಿರುವ ಸೌಕರ್ಯಗಳ ಕುರಿತು ಚರ್ಚಿಸಿ ಅವರ ಯೋಗಕ್ಷೇಮವನ್ನು ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ವಿಚಾರಿಸಿದರು.

ಜಿಲ್ಲಾಡಳಿತ ಕೋವಿಡ್ 19 ಸೋಂಕಿತ ಚಿಕಿತ್ಸೆಗೆ ಹಾಗೂ ಕ್ವಾರಂಟೈನ್ ನಲ್ಲಿರುವರ ಇರುವವರಿಗೆ ತೆಗೆದುಕೊಳ್ಳಬೇಕಾಗಿರುವ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.

RELATED ARTICLES  ಕಡ್ನೀರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮೆಟ್ರಿಕ್ ಮೇಳ: ವ್ಯವಹಾರಿಕ ಜ್ಞಾನ ಹೆಚ್ಚಿಸಿಕೊಳ್ಳಲು ಗಣ್ಯರ ಕರೆ

ಈ ಸಂದಿಗ್ಧ ಸಮಯದಲ್ಲಿ ಕೊರೊನಾ ಸೋಂಕಿತರು ಹಾಗೂ ಕ್ವಾರಂಟೈನ್ ನಲ್ಲಿ ಇರುವವರು ಯಾರು ಸಹ ಭಯಪಡದೆ ಧೈರ್ಯದಿಂದ ಈ ಮಹಾಮಾರಿಯನ್ನು ಎದುರಿಸಬೇಕಾಗಿದೆ ರಾಜ್ಯ ಸರಕಾರ, ಜಿಲ್ಲಾಡಳಿತ ಸೋಂಕಿತ ಚಿಕಿತ್ಸೆಗೆ ಎಲ್ಲಾ ರೀತಿಯಲ್ಲಿಯು ಸಹ ಸಿದ್ಧವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

RELATED ARTICLES  ಕುಮಟಾಕ್ಕೆ ನಿವೇದಿತ ಆಳ್ವಾಗೆ ಕಾಂಗ್ರೆಸ್ ಟಿಕೆಟ್ ಘೋಷಣೆ

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಹರೀಶ್ ಕುಮಾರ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜು, ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಹಮ್ಮದ ರೋಶನ್, ಜಿಲ್ಲಾ ಆರೋಗ್ಯಧಿಕಾರಿ ಡಾ.ಜಿ.ಎನ್.ಆಶೋಕ ಕುಮಾರ ಮುಂತಾದವರು ಉಪಸ್ಥಿತರಿದ್ದರು.