ಕುಮಟಾ: ಕುಟುಂಬದ ಸದಸ್ಯರೊಂದಿಗೆ ಮಹಾರಾಷ್ಟ್ರದಿಂದ ಉಡುಪಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಕುಮಟಾ ಸಮೀಪದ ಹಿರೇಗುತ್ತಿ ಬಳಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಕೈಯಲ್ಲಿ ಕ್ವಾರಂಟೈನ್ ಸೀಲ್ ಇದ್ದು, ಕೊರೋನಾ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಿಂದ ಬಂದ ಕಾರಣ ಸ್ವಲ್ಪ ಮಟ್ಟಿಗೆ ಜನತೆ ಗೊಂದಲಕ್ಕೆ ಈಡಾಗಿದ್ದರು.
ಮೃತದೇಹವನ್ನು ಸುರಕ್ಷತೆಯೊಂದಿಗೆ ಅಂಬ್ಯುಲೆನ್ಸ್ ಸಿಬ್ಬಂದಿ ಕುಮಟಾ ತಾಲೂಕು ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
‘ಇದೊಂದು ಆಕಸ್ಮಿಕ ಸಾವು. ಈ ಬಗ್ಗೆ ಯಾವುದೇ ಆತಂಕ ಜನರಿಗೆ ಬೇಡ’ ಎಂದು ಉಪವಿಭಾಗಾಧಿಕಾರಿ ಅಜಿತ್ ಅವರು ಮಾಹಿತಿ ನೀಡಿದ್ದಾರೆ..