ಭಟ್ಕಳ: ಕಳೆದ ಕೆಲವು ದಿನಗಳಿಂದ ಭಟ್ಕಳದಲ್ಲಿ ಕೊರೊನಾ ಪ್ರಕರಣ ಏರಿಕೆಯತ್ತ ಸಾಗುತ್ತಲೇ ಇದ್ದು, ಗುರುವಾರ ಬೆಳಿಗ್ಗೆ ಉತ್ತರ ಕನ್ನಡದಲ್ಲಿ ಹೊಸ ಪ್ರಕರಣ ಪತ್ತೆಯಾಗದಿರುವುದು ತುಸು ಸಮಾಧಾನ ತಂದಿದೆ.
ಗುರುವಾರದ ಬೆಳಿಗ್ಗೆಯ ವರದಿಯಂತೆ ರಾಜ್ಯದಲ್ಲಿ ಒಟ್ಟು 22 ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಭಟ್ಕಳದಲ್ಲಿ 29 ಸಕ್ರಿಯ ಕರೋನಾ ಪೀಡಿತರು, ಕುಮಟಾದಲ್ಲಿ ನಿನ್ನೆ ಹೊಸದಾಗಿ ಬಂದ 1 ಪ್ರಕರಣ ಸೇರಿ ಜಿಲ್ಲೆಯಲ್ಲಿ ಸಕ್ರಿಯ ಕೊರೊನಾ ಸೋಂಕಿತರ ಸಂಖ್ಯೆ 30 ಇತ್ತು. ಒಟ್ಟು ಕೊರೊನಾ ಸೋಂಕಿತರು 41 ಆಗಿದ್ದು, ಈವರೆಗೆ 11 ಕರೋನಾ ಪೀಡಿತರು ಗುಣಮುಖರಾಗಿದ್ದಾರೆ.