ಭಟ್ಕಳ: ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು ರೈತರು ಬೀಜ ಬಿತ್ತನೆಯ ಕಾರ್ಯಕ್ಕೆ ತಯಾರಾಗುತ್ತಿದ್ದಾರೆ. ತಾಲೂಕಿನ ಸೂಸಗಡಿ ಹೋಬಳಿ ಹಾಗೂ ಮಾವಳ್ಳಿ ಹೋಬಳಿಗಳಲ್ಲಿ ಸಾವಿರಾರು ರೈತರು ಕೃಷಿ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದು ರೈತರಿಗೆ ಅನುಕೂಲವಾಗುವಂತೆ ಕೃಷಿ ಇಲಾಖೆಯಿಂದ ಬೀಜ ವಿತರಣೆಯ ಕಾರ್ಯಕ್ಕೆ ಮಾವಳ್ಳಿ ಹೋಬಳಿಯಲ್ಲಿ ಶಾಸಕ ಸುನಿಲ್ ನಾಯ್ಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಟ್ಕಳ ನಗರ ಹಾಟ್‍ಸ್ಪಾಟ್ ಆಗಿದ್ದರೂ ಸಹ ಕೃಷಿ ಚಟುವಟಿಕೆಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಗೊಳಿಸಲಾಗಿದೆ. ಕೃಷಿಕರು ಕೃಷಿ ಇಲಾಖೆಯಿಂದ ಭತ್ತದ ಬೀಜ ಖರೀಧಿಸುವಾಗ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಸೂಚಿಸಿದರಲ್ಲದೇ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಾಗ ಕೂಡಾ ಮಾಸ್ಕ ಹಾಕುವುದರ ಜತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕರೆ ನೀಡಿದರು.