ಕುಮಟಾದಲ್ಲಿ ಗುರುತಿಸಲಾದ ಮೊದಲ ಕರೋನಾ ಪ್ರಕರಣವನ್ನು ಜನತೆಗೆ ಹರಡದಂತೆ ಯಶಸ್ವಿಯಾದ ಕುಮಟಾ ಪಿಎಸ್ಐ ಹಾಗೂ ಇತರರನ್ನು ಎಸ್.ಪಿ ಯವರು ಅಭಿನಂದಿಸಿದ್ದು. ಅವರುಗಳ ಕಾರ್ಯ ಶ್ಲಾಘಿಸಿದ್ದಾರೆ.
ದಿನಾಂಕ: 05-05-2020 ರಂದು ಕುಮಟಾ ತಾಲೂಕಿನ ವನ್ನಳ್ಳಿ ಗ್ರಾಮದ ನಿವಾಸಿಯಾದ ಒಬ್ಬ ವ್ಯಕ್ತಿಯು ಮಹಾರಾಷ್ಟ್ರದ ರಾಜ್ಯದ ರತ್ನಗಿರಿಯಿಂದ ಒಂದು ಮೀನಿನ ಲಾರಿಯಲ್ಲಿ ಸ್ವಂತ ಗ್ರಾಮ ಕುಮಟಾಕ್ಕೆ ಬರುತ್ತಿರುವ ಬಗ್ಗೆ ಕುಮಟಾ ಠಾಣೆ ಪಿ.ಎಸ್.ಐ. ರವರಾದ ಆದ ಶ್ರೀ ಆನಂದಮೂರ್ತಿ ರವರಿಗೆ ಲಭ್ಯವಾದ ಮಾಹಿತಿ ಮೇರೆಗೆ, ಠಾಣೆಯ ಸಿಬ್ಬಂದಿಯವರಾದ ಸಿಹೆಚ್ ಸಿ-750 ತಿಮ್ಮಣ್ಣ ನಾಯಕ, ಸಿಪಿಸಿ-1280 ಪ್ರದೀಪ ನಾಯಕ ಮತ್ತು ಸಿಪಿಸಿ-1350 ಶಿವಾನಂದ ಜಾಡರ ರವರ ಸಹಾಯದಿಂದ ಕುಮಟಾ ಬಸ್ ನಿಲ್ದಾಣದ ಬಳಿ ಸ್ಥಾಪಿಸಲಾದ ಚೆಕ್ ಪೋಸ್ಟ್ ನಲ್ಲಿ ಮೀನಿನ ಲಾರಿಯನ್ನು ಸ್ಚಲ್ಪ ಅಂತರದಲ್ಲಿ ತಡೆದು, ವಿಶೇಷವಾಗಿ ತಪಾಸಣೆ ನಡೆಸಿ ಅದರಲ್ಲಿದ್ದ ರತ್ನಗಿರಿಯಿಂದ ಬಂದಂತ ವನ್ನಳ್ಳಿ ಮೂಲದ ವ್ಯಕ್ತಿಯನ್ನು ಗುರುತಿಸಿ, SOP ಯಲ್ಲಿ ತಿಳಿಸಿರುವಂತೆ ಆತನಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು, ಸದರ ಮೀನಿನ ಲಾರಿಯನ್ನು ಬೆಂಗಾವಲಿನಲ್ಲಿ ಕುಮಟಾ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಆಸ್ಪತ್ರೆಯ ಬಳಿ ಸದರಿ ವ್ಯಕ್ತಿಯನ್ನು ಮೀನಿನ ಲಾರಿಯಿಂದ ಕೆಳಗಿಳಿಯುವಂತೆ ಸೂಚಿಸಿ ಅವನನ್ನು ಸರಕಾರಿ ಆಸ್ಪತ್ರೆಯಲ್ಲಿ ಕೋವಿಡ-19ರ ಆರೋಗ್ಯ ತಪಾಸಣೆ ಪ್ರಕ್ರಿಯೆಗೆ ಒಳಪಡಿಸಿ ಆತನ ಗಂಟಲು ದ್ರವವನ್ನು ವೈದ್ಯಾಧಿಕಾರಿಗಳ ಮುಖಾಂತರ ಸಂಗ್ರಹಿದ ನಂತರ ಆತನನ್ನು ಅಂಬ್ಯುಲೆನ್ಸ ಮೂಲಕ ಸರಕಾರಿ ಕ್ವಾರೆಂಟೈನ್ ನಲ್ಲಿ ಇರಿಸಲಾಗಿತ್ತು. ದಿನಾಂಕ:13-05-2020 ರಂದು ಸದರಿ ವನ್ನಳ್ಳಿ ಮುಲದ ವ್ಯಕ್ತಿಯ ಗಂಟಲು ದ್ರವ ಪರೀಕ್ಷಾ ವರದಿಯು ಕೊವಿಡ್-19 ಪಾಸಿಟಿವ್ ಅಂತಾ ಬಂದಿದ್ದು, ರೋಗಿ ನಂ-946 ಅಂತಾ ಗುರುತಿಸಲಾಗಿದೆ. ಕುಮಟಾ ಪೊಲೀಸ್ ಠಾಣಾ ಪಿಎಸ್ಐ ಮತ್ತು ಸಿಬ್ಬಂದಿಗಳ ಸಮಯಪ್ರಜ್ನೆ ಹಾಗೂ ಸೂಕ್ತ ಸಮಯದಲ್ಲಿ ಉತ್ತಮ ಕಾರ್ಯಾಚರಣೆಯ ಮೂಲಕ ಕುಮಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹರಡಬಹುದಾಗಿದ್ದ ಕೊರೊನಾ ಪ್ರಕರಣವನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ. ಈ ಮೂಲಕ ಕುಮಟಾ ಪಿ.ಎಸ್.ಐ. ಮತ್ತು ಸಿಬ್ಬಂದಿಯವರ ಕರ್ತವ್ಯವನ್ನು ಪ್ರಶಂಸಿಸುವುದಾಗಿ ಎಸ್.ಪಿ ಶಿವಪ್ರಕಾಶ ದೇವರಾಜು ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.