ಭಾರತದಲ್ಲಿ ಕೊರೋನಾ ವೈರಸ್ ರಣಕೇಕೆ ಹಾಕುತ್ತಿದ್ದು, ಸೋಂಕಿತರ ಸಂಖ್ಯೆ 82,000 ಗಡಿಯತ್ತ ಸಾಗುತ್ತಿದೆ. ಇದರೊಂದಿಗೆ ವಿಶ್ವದಲ್ಲಿಯೇ ಮೊದಲ ಬಾರಿಗೆ ಕೊರೋನಾ ಕಾಣಿಸಿಕೊಂಡ ಚೀನಾವನ್ನು ಸೋಂಕಿತರ ಸಂಖ್ಯೆಯಲ್ಲಿ ಹಿಂದಿಕ್ಕುವತ್ತ ಭಾರತ ದಾಪುಗಾಲು ಇಟ್ಟಿದೆ.
ಚೀನಾಡಲ್ಲಿ 82,929 ಸೋಂಕಿತರಿದ್ದು, ಕೇವಲ ಕೆಲವೇ ಸಂಖ್ಯೆಯಲ್ಲಷ್ಟೇ ಭಾರತ ಹಿಂದೆ ಇದೆ. ನಿತ್ಯ ದಾಖಲಾಗುತ್ತಿರುವ ಪ್ರಕರಣಗಳ ವೇಗ ನೊಡಿದರೆ ಇಂದು ಭಾರತ ಚೀನಾವನ್ನು ಹಿಂದಿಕ್ಕುವ ಎಲ್ಲಾ ಸಾಧ್ಯತೆಗಳೂ ಕಂಡು ಬರುತ್ತಿದೆ.
ಕಳೆದ 24 ಗಂಟೆಗಳಲ್ಲಿ ಒಟ್ಟು 3967 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, 100 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 81,970 ಕ್ಕೆ ಏರಿಕೆಯಾಗಿದ್ದು, 2,649 ಮಂದಿ ಬಲಿಯಾಗಿದ್ದಾರೆ.
ನಮ್ಮ ವಾಟ್ಸಪ್ ಗ್ರುಪ್ ಸೇರಿ ಸುದ್ದಿಗಳನ್ನು ಪಡೆಯಿರಿ
https://chat.whatsapp.com/8H2HbP2ZL8BHcltyhn7k6P