ಉಡುಪಿ : ಕಳೆದ ಮೂರು ದಿನಗಳ ಹಿಂದೆ ದುಬೈನಿಂದ ಮಂಗಳೂರಿಗೆ ವಿಮಾನದಲ್ಲಿ ಪತ್ನಿ ಹಾಗೂ ಮಗುವಿನ ಜೊತೆ ಆಗಮಿಸಿ, ಮಂಗಳೂರಿನ ಹೋಟೆಲ್ ವೊಂದರಲ್ಲಿ ಕ್ವಾರಂಟೈನ್ ನಲ್ಲಿದ್ದ ಕಾರವಾರ ಮೂಲದ ವ್ಯಕ್ತಿಯಲ್ಲಿ ಕೊರೋನಾ ಪಾಸಿಟೀವ್ ಬಂದಿದ್ದು. ವಿಮಾನದಲ್ಲಿ ಬಂದಿದ್ದ 16 ಸೋಂಕಿತರಲ್ಲಿ ಈತನೂ ಓರ್ವನಾಗಿದ್ದಾನೆ.
ಈತನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದ್ದು, ಆತನಲ್ಲಿ ಕೊರೋನಾ ಪಾಸಿಟಿವ್ ಬಂದಿದೆ. ಇನ್ನು ಈತನ ಪತ್ನಿ ಗರ್ಭಿಣಿಯಾಗಿದ್ದು ಮಗು ಹಾಗೂ ಪತ್ನಿಯ ಗಂಟಲು ದ್ರವದ ಮಾದರಿಯನ್ನೂ ಪರೀಕ್ಷೆಗೆ ಸಹ ಕಳುಹಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.