ಕುಮಟಾ : ಕೊರೋನಾ ದೇಶದೆಲ್ಲೆಡೆ ತಲ್ಲಣ ಮೂಡಿಸಿದ ಕಾರಣ ಜನತೆ ಮನೆಬಿಟ್ಟು ಹೊರಬರದಂತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ದೇಶದ ಪ್ರಧಾನಿಗಳು ಲಾಕ್ ಡೌನ್ ಘೋಷಿಸಿದರು. ಇದರಿಂದಾಗಿ ನಿತ್ಯ ನಡೆಯುತ್ತಿದ್ದ ಮಾದರಿಯಲ್ಲಿಯೇ ಶೈಕ್ಷಣಿಕ ಪ್ರಕ್ರಿಯೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಪರೀಕ್ಷೆಗಳನ್ನೂ ನಡೆಸಲಾಗದೆ ವಿದ್ಯಾರ್ಥಿಗಳಿಗೆ ಹಾಗೂ ಪಾಲಕ ವರ್ಗಕ್ಕೆ ಗೊಂದಲ ಉಂಟಾಯಿತು. ಇಂತಹ ವಿಷಮ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಕುಮಟಾ ತಾಲೂಕಿನ ಕೊಂಕಣ ಎಜ್ಯುಕೇಶನ್ ಡಿಜಿಟಲ್ ಮಾಧ್ಯಮದ ಮೂಲಕ ಮಕ್ಕಳನ್ನು ತಲುಪಿ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಹೊಸ ಭರವಸೆ ಮೂಡಿಸಿತು.
ಜಿಲ್ಲೆಯಲ್ಲಿಯೇ ಈಗಾಗಲೇ ಅತ್ಯುತ್ತಮ ಹೆಸರು ಪಡೆದಿರುವ ಹಾಗೂ ಹಿಂದಿನ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ ಕೊಂಕಣ ಎಜುಕೇಶನ್ ಟ್ರಸ್ಟ್ ವಿದ್ಯಾರ್ಥಿಗಳಿಗೆ ಭದ್ರ ಭವಿಷ್ಯ ರೂಪಿಸುವ ದೃಷ್ಟಿಯಿಂದ ಹಾಗೂ ಕರೋನಾ ಕರಿ ನೆರಳ ನಡುವೆಯೂ ಯಾರೂ ಭಯ ಪಡದಂತೆ ಮಕ್ಕಳಲ್ಲಿ ಹಾಗೂ ಪಾಲಕರಲ್ಲಿ ಧನಾತ್ಮಕ ಚಿಂತನೆ ಮೂಡಿಸುವ ನಿಟ್ಟಿನಲ್ಲಿ ಗಣ್ಯರ ಸಂದೇಶಗಳನ್ನು ಡಿಜಿಟಲ್ ಕಾರ್ಡಗಳ ಮೂಲಕ ಪಾಲಕರಿಗೆ ತಲುಪಿಸುತ್ತಿತ್ತು. ಹಿರಿಯರು ಸಾಹಿತಿಗಳು,ಸಮಾಜದಲ್ಲಿ ಉನ್ನತ ಹುದ್ದೆಯಲ್ಲಿರುವವರು, ವಿವಿಧ ಅಧಿಕಾರಿಗಳು ಮಕ್ಕಳಿಗೆ ಸಂದೇಶ ನೀಡಿ ಮಕ್ಕಳಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಈ ಮೂಲಕ ನಿಧಾನಕ್ಕೆ ತನ್ನ ಡಿಜಿಟಲ್ ಮಾಧ್ಯಮದ ಮೂಲಕ ವಿದ್ಯಾರ್ಥಿಗಳನ್ನು ತಲುಪುವ ಹೊಸ ಹೆಜ್ಜೆಯಿಟ್ಟಿತು.
ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಂಗ ಸಂಸ್ಥೆಗಳಾದ ರಂಗಾದಾಸ ಶಾನಭಾಗ ಹೆಗಡೆಕರ ಬಾಲಮಂದಿರ, ಸರಸ್ವತಿ ವಿದ್ಯಾಕೇಂದ್ರ, ಸಿ.ವಿ.ಎಸ್.ಕೆ ಪ್ರೌಢಶಾಲೆ ಹಾಗೂ ಸರಸ್ವತಿ ಪಿ.ಯು ಕಾಲೇಜ್ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ದೃಷ್ಟಿಯಿಂದ ಹಾಗೂ ಎಲ್‍ಕೆಜಿ, ಯುಕೆಜಿ, ಪ್ರಾಥಮಿಕ ವರ್ಗದ ವಿದ್ಯಾರ್ಥಿಗಳಿಗೆ ಯಾವುದೇ ವಿಶೇಷ ಒತ್ತಡ ಇಲ್ಲದಂತೆ ನಿರಂತರ ಸಂಪರ್ಕದಲ್ಲಿರುವ ಉದ್ದೇಶದಿಂದ ಲಾಕ್ ಡೌನ್ ಘೋಷಣೆಯಾದ ಮೊದಲನೇ ವಾರದಲ್ಲಿಯೇ, ಇತರ ಸಂಸ್ಥೆಗಳು ಆನ್ ಲೈನ್ ತರಗತಿಗಳ ಬಗ್ಗೆ ಯೋಜಿಸುವ ಮೊದಲೇ ತರಗತಿವಾರು ಪಾಲಕರ ವಾಟ್ಸಪ್ ಗುಂಪುಗಳನ್ನು ರಚಿಸಿ ಅದರ ಮೂಲಕ ಮಕ್ಕಳಿಗೆ ಪ್ರತಿನಿತ್ಯ ವಿವಿಧ ಚಟುವಟಿಕೆ ನೀಡಲು ಪ್ರಾರಂಭಿಸಿತು. ಪಠ್ಯ ಹಾಗೂ ಪಠ್ಯೇತರ, ಜೀವನ ಅಗತ್ಯ ಅಂಶಗಳನ್ನು ವಿದ್ಯಾರ್ಥಿಗಳ ಪಾಲಕರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದು ವಿದ್ಯಾರ್ಥಿಗಳಿಗೆ ತಲುಪಿಸುವ ಕಾರ್ಯ ಮಾಡಿ, ದ್ವಿತೀಯ ಹಂತದ ಡಿಜಿಟಲೀಕರಣದತ್ತ ಮುನ್ನಡೆಯಿತು.
ಡಿಜಿಟಲ್ ಮೀಡಿಯಾದ ಮೂಲಕ ಮಕ್ಕಳೊಂದಿಗೆ ನಿರಂತರ ಸಂಪರ್ಕದಲ್ಲಿರುವ ಶಿಕ್ಷಕರು ವಿದ್ಯಾರ್ಥಿಗಳಿಗೆ ಅಂತರ್ಜಾಲ ಮಾಧ್ಯಮದ ಮೂಲಕ ಪ್ರತಿದಿನ ವಿದ್ಯಾರ್ಥಿಗಳನ್ನು ಕೆಲ ಹೊತ್ತು ಶಿಕ್ಷಣ ಪ್ರಕ್ರಿಯೆಯಲ್ಲಿ ತೊಡಗಿಸುವ ಪ್ರಯತ್ನ ಮಾಡಿದರು. ಆನ್ ಲೈನ್ ನಲ್ಲಿ ನೀಡಲಾದ ಕಾರ್ಯವನ್ನು ಮಕ್ಕಳು ಪೂರ್ಣಗೊಳಿಸಿ ಸಂಸ್ಥೆಯು ನೀಡಿದ ಗೂಗಲ್ ಫಾರ್ಮ್ ಗೆ ಅಪೆÇ್ಲೀಡ್ ಮಾಡುವುದರ ಮೂಲಕ ಅದು ಶಿಕ್ಷಕರ ಕೈ ಸೇರಿ ಅವುಗಳ ಪರಿಶೀಲನೆ ಹಾಗೂ ವಿದ್ಯಾರ್ಥಿಗಳಿಗೆ ಹಿಮ್ಮಾಹಿತಿ ನೀಡುವ ಕಾರ್ಯ ನಡೆಯಿತು.
ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ ಶಿಕ್ಷಕರು ಆಡಿಯೋದ ಮೂಲಕ ಅಗತ್ಯವಿರುವ ಪಠ್ಯ ವಿಷಯಗಳನ್ನು ತಲುಪಿಸಿ, ಯಾವುದಾದರೂ ಗೊಂದಲಗಳಿದ್ದರೆ ಮಕ್ಕಳ ಪ್ರಶ್ನೆಗೆ ಉತ್ತರಿಸುತ್ತಿದ್ದಾರೆ. ಇದೀಗ ಆನ್ಲೈನ್ ತರಗತಿಗಳು ಪ್ರಾರಂಭವಾಗಿದ್ದು ವಿದ್ಯಾರ್ಥಿಗಳು ಮನೆಯಲ್ಲಿಯೇ ಡಿಜಿಟಲ್ ಮಾಧ್ಯಮದ ಮೂಲಕ ಶಿಕ್ಷಣ ಪಡೆಯಬಹುದಾಗಿದೆ. ಅಗತ್ಯವಿರುವ ಪಠ್ಯ ವಿಷಯಗಳನ್ನು ಹೇಳಿ, ಮಕ್ಕಳ ಜತೆಗೆ ಸಂವಾದ ನಡೆಸಿ ಮಕ್ಕಳಿಗೆ ಸ್ಫೂರ್ತಿ ತುಂಬುವ ಹಾಗೂ ಮಕ್ಕಳಿಗೆ ಕಲಿಕೆಯಲ್ಲಿ ಗೊಂದಲಗಳಿದ್ದರೆ ಅವುಗಳನ್ನೂ ಪರಿಹರಿಸುವ ಕಾರ್ಯ ನಡೆದಿದೆ.
ಕೊಂಕಣ ಎಜುಕೇಶನ್ ಟ್ರಸ್ಟ್ ನ ಪಿ.ಯು.ಸಿ ವಿಭಾಗದಲ್ಲಿ ಈಗಾಗಲೇ ಕಾಮರ್ಸ್ ವಿಭಾಗಕ್ಕೆ ತ್ರಿಶಾ ಕ್ಲಾಸಸ್ ಅವರ ಸಹಕಾರದೊಂದಿಗೆ ವಿವಿಧ ಬಗೆಯ ಆನ್ ಲೈನ್ ತರಗತಿಗಳನ್ನು ನಡೆಸಲಾಗಿದೆ. ಪಿಯುಸಿ ದ್ವಿತೀಯ ವರ್ಷಕ್ಕೆ ಸಂಬಂಧಿಸಿದ ಸಿಲೆಬಸ್ ಗಳು ಹಾಗೂ ಲೈವ್ ಕ್ಲಾಸಸ್ ಗಳ ಮೂಲಕ ಮಕ್ಕಳಿಗೆ ವ್ಯಕ್ತಿತ್ವ ವಿಕಸನ ನೀಡುವ ಚೈತನ್ಯ ತುಂಬುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಿದೆ. ಮಕ್ಕಳ ಕ್ರಿಯಾಶೀಲತೆ ಹಾಗೂ ಬುದ್ಧಿಮತ್ತೆ ಹೆಚ್ಚಿಸುವ ವೈವಿಧ್ಯಮಯ ತರಗತಿಗಳನ್ನು ಗಣ್ಯ ವ್ಯಕ್ತಿಗಳಿಂದ ನಡೆಸಲಾಗಿದೆ.
ಪಿ.ಯು.ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿ.ಇ.ಟಿ ಹಾಗೂ ನೀಟ್, ಜೆ.ಇ ಮಾದರಿ ಪರೀಕ್ಷೆಗಳನ್ನು ಆನ್ ಲೈನ್ ಮೂಲಕವೇ ನಡೆಸಲಾಗಿದ್ದು ವಿದ್ಯಾರ್ಥಿಗಳಿಗೆ ಅಗತ್ಯ ಮಾಹಿತಿಯನ್ನು ನೀಡುವ ದೃಷ್ಟಿಯಿಂದ ಈ ಕಾರ್ಯ ಕೈಗೊಳ್ಳಲಾಗಿದೆ . ಸಿ.ಇ.ಟಿ ಕ್ರ್ಯಾಶ್ ಕೋರ್ಸ್ ಗಳನ್ನು ನಡೆಸುವ ಮೂಲಕ ಸ್ಪರ್ಧಾತ್ಮಕ ಜಗಕ್ಕಾಗಿ ವಿದ್ಯಾರ್ಥಿಗಳನ್ನು ಅಣಿಗೊಳಿಸುವ ನಿಟ್ಟಿನಲ್ಲಿ ಅಗತ್ಯವಾದ ವ್ಯವಸ್ಥೆ ಮಾಡಿಕೊಂಡಿದೆ.
ಶಾಲಾ ತರಗತಿ ನಡೆಸಲು ಸಾಧ್ಯವಾಗದೇ ಇದ್ದರೂ ಲಾಕ್ ಡೌನ್ ನಲ್ಲಿ ಸಮಯ ಪೋಲಾಗದಂತೆ, ಮಕ್ಕಳಲ್ಲಿ ಆತ್ಮಸ್ಥೈರ್ಯ ತುಂಬಿ, ಅವರನ್ನು ಕ್ರಿಯಾಶೀಲರನ್ನಾಗಿ ಇಡುವ ದೃಷ್ಟಿಯಿಂದ ತಂತ್ರಜ್ಞಾನದ ವ್ಯವಸ್ಥೆ ಬಳಸಿಕೊಂಡು ಮಕ್ಕಳಿಗೆ ಅದು ಹೊರೆಯಾಗದಂತೆ , ಮಕ್ಕಳ ಮುಂದಿನ ಭವಿಷ್ಯಕ್ಕೆ ಅವರು ಅಣಿಯಾಗುವಂತೆ ಪ್ರಯತ್ನ ನಡೆಸುವ ಮೂಲಕ ವಿದ್ಯಾರ್ಥಿ ಸ್ನೇಹಿ ಹಾಗೂ ಸಮಾಜಮುಖಿ ಶಿಕ್ಷಣ ಸಂಸ್ಥೆಯ ಕರ್ತವ್ಯವನ್ನು ಪಾಲಿಸುವಲ್ಲಿ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಸಫಲವಾಗಿದೆ.
ಹೊಸದಾಗಿ ಸಂಸ್ಥೆಯಲ್ಲಿ ಪ್ರವೇಶಾತಿ ಮಾಡಿಕೊಳ್ಳುವವರಿಗೂ ಸಂಸ್ಥೆ ಆನ್ ಲೈನ್‍ನಲ್ಲಿ ಅವಕಾಶ ನೀಡಿದ್ದು, ತಾತ್ಕಾಲಿಕ ಪ್ರವೇಶಾತಿ ಅರ್ಜಿಯನ್ನು https://tinyurl.com/KONKANADMISSION ನಲ್ಲಿ ಭರ್ತಿಮಾಡಲು ಅವಕಾಶ ನೀಡಿದೆ.
“ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಹೆಚ್ಚು ಸಾಧನೆ ಮಾಡಲಿ ಎಂಬ ದೃಷ್ಟಿಯಿಂದ ಅವರಿಗೆ ಸಹಕಾರಿಯಾಗಿ ಆನ್‍ಲೈನ್ ತರಗತಿಗಳನ್ನು ಪ್ರಾರಂಭಿಸಿದ್ದು. ವಿದ್ಯಾರ್ಥಿಗಳಿಗೆ ಹೊರೆಯಾಗದಂತೆ ಅವರ ಸಮಯ ವ್ಯರ್ಥವಾಗದಂತೆ ಉತ್ತಮ ರೀತಿಯಲ್ಲಿ ಈ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳು ಭಯಪಡುವ ಅಗತ್ಯವಿಲ್ಲ ಕೊಂಕಣ ಎಜ್ಯುಕೇಶನ್ ಸದಾ ಅವರ ಜೊತೆಗಿದೆ” – ಶ್ರೀಮತಿ ಸುಮಾ ಪ್ರಭು ಮುಖ್ಯೋಪಾಧ್ಯಾಯರು ಸಿ.ವಿ.ಎಸ್.ಕೆ ಪ್ರೌಢಶಾಲೆ.
“ಇಂತಹ ಕಠಿಣ ಪರಿಸ್ಥಿತಿಯಲ್ಲಿಯೂ ಸಿ.ಇ.ಟಿ, ಜೆ.ಇ.ಇ ನೀಟ್ ನಂತಹ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಅಗತ್ಯವಾದ ಮಾಹಿತಿಯನ್ನು ನೀಡಿ ಅವರನ್ನು ಸ್ಪರ್ಧಾ ಜಗತ್ತಿಗೆ ಸಿದ್ಧಗೊಳಿಸುವ ಕಾರ್ಯವನ್ನು ನಾವು ಆನ್ ಲೈನ್ ಮುಖಾಂತರ ನಡೆಸುತ್ತಿದ್ದು ಅದು ನಮಗೆ ಸಮಾಧಾನ ತಂದಿz.”É – ಡಾ. ಸುಲೋಚನಾ ರಾವ್ ಪಿ.ಯು ಸಂಸ್ಥೆಯ ಪ್ರಾಂಶುಪಾಲರು.
“ಮನೆಗಳಲ್ಲಿ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಮಕ್ಕಳನ್ನು ತೊಡಗಿಸುವುದೇ ಕಷ್ಟವಾಗಿರುವಾಗ ಕೊಂಕಣ ಎಜ್ಯುಕೇಶನ್ ಆನ್ ಲೈನ್ ಮಾಧ್ಯಮದ ಮೂಲಕ ಮಕ್ಕಳನ್ನು ಕಲಿಕೆಗೆ ತೊಡಗಿಸುವ ಕಾರ್ಯ ಮಾಡಿದ್ದು ಸಂಸ್ಥೆಗೆ ಮಕ್ಕಳನ್ನು ಸೇರಿಸಿದ ನಮಗೆ ಧನ್ಯತಾ ಭಾವ ಮೂಡಿದೆ.” – ಪಾಲಕರು