ಭಟ್ಕಳ : ಕಳೆದ ಕೆಲ ದಿನದಿಂದ ಸ್ವಲ್ಪ ನೆಮ್ಮದಿಯಾಗಿದ್ದ ಉತ್ತರ ಕನ್ನಡಿಗರಿಗೆ ಇಂದು ಮತ್ತೊಮ್ಮೆ ಶಾಕ್ ಎದುರಾಗಿದೆ.ಇದೀಗ ತಾಲೂಕಿನ ವೃದ್ಧನೋರ್ವನಿಗೆ ಸೋಂಕು ಇರುವುದು ಧೃಡಪಟ್ಟಿದ್ದು, ಸಕ್ರಿಯ ಸೋಂಕಿತರ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಭಟ್ಕಳ ಮೂಲದ 68 ವರ್ಷದ ವೃದ್ಧನಿಗೆ ಸೋಂಕು ದೃಢವಾಗಿದ್ದು, ಈತನಿಗೆ ಸಂಖ್ಯೆ 740ರ ಸಂಪರ್ಕದಿಂದ ಸೋಂಕು ತಗುಲಿರುವುದಾಗಿ ಸಂಜೆ ಬುಲೆಟಿನ್ ನಲ್ಲಿ ಧೃಡಪಟ್ಟಿದೆ.
ಮಂಗಳೂರಿನ ಫಸ್ಟ್ ನ್ಯೂರೊ ಆಸ್ಪತ್ರೆ ಸಂಪರ್ಕಿಸಿದ್ದ ಕುಟುಂಬದ 18 ವರ್ಷದ ಯುವತಿಯಲ್ಲಿ ಮೊದಲು ಸೋಂಕು ಪತ್ತೆಯಾಗಿತ್ತು. ಇದೀಗ ಈಕೆಯ ಕುಟುಂಬಸ್ಥರಾದ 68 ವರ್ಷದ ವೃದ್ಧನಿಗೆ ಸೋಂಕು ಪತ್ತೆಯಾಗಿದೆ. ಆದರೆ ಯುವತಿಗೆ ಪತ್ತೆಯಾದಾಗಲೇ ವೃದ್ಧನನ್ನು ಕ್ವಾರಂಟೈನ್ ಮಾಡಿದ ಪರಿಣಾಮ ಆತನಿಂದ ಸೋಂಕು ಹರಡಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ.