ಹೊನ್ನಾವರ: ಉತ್ತರಕನ್ನಡ ಜಿಲ್ಲೆಯಲ್ಲಿ ಭಟ್ಕಳ ತಾಲೂಕಿಗೆ ಸೀಮಿತವಾಗಿದ್ದ ಕರೋನಾ ಮುಂಬೈ ರತ್ನಗಿರಿ ಆಗಮಿಸಿದ ವ್ಯಕ್ತಿಯಿಂದ ಕುಮುಟಾ ತಾಲೂಕಿಗೆ ಬಂದಿತ್ತು. ಭಟ್ಕಳ ಕುಮುಟಾ ಮಧ್ಯೆ ಇರುವ ಹೊನ್ನಾವರದ ಜನತೆ ಆತಂಕದ ಮಧ್ಯೆ ತಮ್ಮ ದೈನಂದಿನ ವ್ಯವಹಾರದಲ್ಲಿ ತೊಡಗಿದ್ದರು.
ಮೂರನೇ ಹಂತದ ಲಾಕ್ ಡೌನ್ ರವಿವಾರ ಅಂತ್ಯವಾದ ಬಳಿಕ ಸೋಮವಾರ ನಾಲ್ಕನೇ ಹಂತದ ಲಾಕ್ ಡೌನ್ ಪ್ರಥಮ ದಿನಕ್ಕೆ ಸಜ್ಜಾಗುತ್ತಿದ್ದರು. ಈ ನಡುವೆ ಇಡೀ ಜಿಲ್ಲೆಯನ್ನು ಬೆಚ್ಚಿ ಬಿಳಿಸುವ ಸುದ್ದಿಯಿದೆ.
ಜಿಲ್ಲೆಯಲ್ಲಿ ಇಂದು ಮತ್ತೆ ಎಂಟು ಜನರಿಗೆ ಕೊರೋನಾ ವೈರಸ್ ಸೋಂಕು ತಗುಲಿರುವುದು ದೃಢಪಟ್ಟಿದೆ.
ಜಿಲ್ಲೆಯ ಭಟ್ಕಳ ಮೂಲದ ಇಬ್ಬರಿಗೆ ಹೊನ್ನಾವರ ಮೂಲದ ನಾಲ್ವರಿಗೆ, ಹಾಗೂ ಮುಂಡಗೋಡ ಮೂಲದ ಇಬ್ಬರಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಇಂದು ಧೃಢಪಟ್ಟ ಎಂಟು ಜನರಲ್ಲಿ ಏಳು ಜನ ಮುಂಬೈನಿಂದ ವಾಪಾಸ್ ಜಿಲ್ಲೆಗೆ ಬಂದಿದ್ದು, ಭಟ್ಕಳ ಮೂಲದ ಎರಡು ವರ್ಷದ ಬಾಲಕಿಗೆ ಮಾತ್ರ ಈಗಾಗಲೇ ಸೋಂಕು ತಗುಲಿರುವವರ ಸಂಪರ್ಕದಿಂದ ಸೋಂಕು ತಗುಲಿದೆ.
ಹೊನ್ನಾವರದ ನಾಲ್ವರು ಸೋಂಕಿತರು ಒಂದೇ ಕುಟುಂಬದವರಾಗಿದ್ದು ಎಲ್ಲರು ಮುಂಬೈನಿಂದ ಬಂದ ನಂತರ ಪಟ್ಟಣದ ಪ್ರಭಾತ್ ನಗರದಲ್ಲಿ ಇರುವ ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇದ್ದರು. ಇದೀಗ ಪ್ರಭಾತ್ ನಗರವನ್ನ ಸೀಲ್ ಡೌನ್ ಮಾಡಲಾಗಿದೆ.
ಹೊನ್ನಾವರ ಪಟ್ಟಣದ ಪ್ರಭಾತನಗರ ಸೀಲ್ ಡೌನ್ ಮಾಡುವ ನಿಟ್ಟಿನಲ್ಲಿ ಪೋಲಿಸ್ ಇಲಾಖೆ ಸಜ್ಜಾಗಿ ರಾತ್ರಿಯೆ ಬ್ಯಾರಿಕೇಟ್ ಅಳವಡಿಸಿದೆ.
ಇನ್ನೊಂದಡೆ ಪಟ್ಟಣಕ್ಕೆಇಂದು ಜಿಲ್ಲಾಧಿಕಾರಿ ಹರೀಶ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸುದಲ್ಲದೇ ಈ ಹಿಂದೆ ಭಟ್ಕಳದಲ್ಲಿ ನಿಯಂತ್ರಣಕ್ಕೆ ಕೈಗೊಂಡ ಕ್ರಮವನ್ನು ಇಲ್ಲಿಯೂ ಅನುಷ್ಟಾನ ಮಾಡುವ ಸಾಧ್ಯತೆ ಇದೆ.