ಕಾರವಾರ: ಮಹಾರಾಷ್ಟ್ರದಿಂದ ಕಾರವಾರಕ್ಕೆ ಬಂದಿದ್ದ ಮತ್ತೋರ್ವನಲ್ಲಿ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ.
ಮಹಾರಾಷ್ಟ್ರದಿಂದ ಗೋವಾಕ್ಕೆ ಬೋಟ್ ನಲ್ಲಿ ತನ್ನ ಸ್ನೇಹಿತನೋರ್ವನ ಜೊತೆ ಬಂದಿದ್ದ 37 ವರ್ಷದ ಸೋಂಕಿತ ವ್ಯಕ್ತಿ, ಗೋವಾದಿಂದ ಹನ್ನೆರಡು ಜನರ ಜೊತೆ ನಡೆದುಕೊಂಡು ಕಾರವಾರದ ಮಾಜಾಳಿ ಗಡಿಗೆ ಮೇ 14ನೇ ತಾರೀಕು ಬಂದಿದ್ದ. ಗೋವಾದಿಂದ ಬಂದವರನ್ನು ಹೋಂ ಕ್ವಾರಂಟೈನ್ ನಲ್ಲಿಡಲಾಗುತ್ತಿದ್ದ ಕಾರಣ, ಈತ ಕೂಡ ಗೋವಾದವರೊಂದಿಗೆ ಗಡಿಗೆ ಬಂದು ತಲುಪಿದ್ದ. ಅಧಿಕಾರಿಗಳು ಮೇಲಿಂದ ಮೇಲೆ ಪ್ರಶ್ನಿಸಿದ ಬಳಿಕ ಸೋಂಕಿತ ವ್ಯಕ್ತಿ ಮಹಾರಾಷ್ಟ್ರದಿಂದ ಬಂದಿರುವುದೆಂದು ತಿಳಿದು ಸಾಂಸ್ಥಿಕ ಕ್ವಾರಂಟೈನ್ ನಲ್ಲಿ ಇಡಲು ಸೂಚಿಸಲಾಗಿತ್ತು.
ಹೀಗಾಗಿ ಆತನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಅದು ಇಂದು ಪಾಸಿಟಿವ್ ಬಂದಿದೆ. ಆತನ ಜೊತೆ ಮಹಾರಾಷ್ಟ್ರದಿಂದ ಬಂದಿದ್ದ ಮತ್ತೋರ್ವ ಸ್ನೇಹಿತ ಹಾಗೂ ಗೋವಾದಿಂದ ಜೊತೆಯಲ್ಲಿ ನಡೆದುಕೊಂಡು ಬಂದವರ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ.