ಹೊನ್ನಾವರ : ಇಂದೂ ಸಹ ಉತ್ತರ ಕನ್ನಡದಲ್ಲಿ ಕೊರೋನಾ ಕೇಕೆ ಮುಂದುವರಿದಿದ್ದು ಮಹಾರಾಷ್ಟ್ರದ ಮುಂಬೈನಿಂದ ಬಂದು ಕ್ವಾರಂಟೈನ್ ಆಗಿದ್ದ ಇಬ್ಬರು, ಗುಜರಾತ್ ಹಾಗೂ ತಮಿಳುನಾಡಿನಿಂದ ಬಂದಿದ್ದ ಇಬ್ಬರನ್ನು ಸೇರಿ ಒಟ್ಟು ನಾಲ್ವರಲ್ಲಿ ಕೋವಿಡ್- 19 ಸೋಂಕು ದೃಢಪಟ್ಟಿದೆ.
ಜೊಯಿಡಾಕ್ಕೆ ತಮಿಳುನಾಡಿನಿಂದ ವಾಪಸ್ಸಾಗಿದ್ದ 31 ವರ್ಷದ ಮಹಿಳೆ, ದಾಂಡೇಲಿಗೆ ಗುಜರಾತ್ ನಿಂದ ಬಂದಿದ್ದ 24 ವರ್ಷದ ಯುವಕ, ಮಹಾರಾಷ್ಟ್ರದ ಮುಂಬೈನಿಂದ ಯಲ್ಲಾಪುರಕ್ಕೆ ಬಂದಿದ್ದ 16 ವರ್ಷದ ಯುವತಿ ಹಾಗೂ ಹೊನ್ನಾವರಕ್ಕೆ ಬಂದಿದ್ದ 34 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದೆ.