ಕುಮಟಾ: ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ 350 ಕ್ಕೂ ಹೆಚ್ಚು ಜನರು ದರ್ಜಿಗಳಿದ್ದು ಅವರಲ್ಲಿ 130 ಜನರು ಮಾತ್ರವೇ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನ್ಯೂ ಪೆನ್ಶನ್ ಸ್ಕೀಮ್ ನೋಂದಾಯಿತರಾಗಿದ್ದಾರೆ.
ಕರೋನಾ ವೈರಸ್ ಸಂಬಂಧ ಸರ್ಕಾರ ವಿಧಿಸಿರುವ ಲಾಕ್ ಡೌನ್ನಿಂದ ದರ್ಜಿಗಳು ಮತ್ತು ಅವರನ್ನು ಆಶ್ರಯಿಸಿರುವ ಕುಟುಂಬ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದೆ. ಅದಲ್ಲದೆ ಕಳೆದ ಅನೇಕ ದಿನಗಳಿಂದ ಕೆಲಸ ಮಾಡಲು ಅವಕಾಶವಿದ್ದರೂ ಗ್ರಾಹಕರಿಲ್ಲದೆ ಖಾಲಿ ಕುಳಿತುಕೊಂಡು ಇವರ ಜೀವನ ಕಷ್ಟಕರವಾಗಿದೆ.
ಆದ್ದರಿಂದ ಸರ್ಕಾರದಿಂದ ಆರ್ಥಿಕ ನೆರವು ದರ್ಜೆಗಳಿಗೆ ನೀಡಬೇಕು ಎಂದು ದರ್ಜೆಗಳ ಸಂಘದವರು ಒತ್ತಾಯಿಸಿದ್ದಾರೆ. ಅವರು ಈ ಬಗ್ಗೆ ಶಾಸಕರಾದ ದಿನಕರ ಶೆಟ್ಟಿ ಹಾಗೂ ತಹಸೀಲ್ದಾರ್ ಅವರಿಗೆ ಮನವಿಯ ಮೂಲಕ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ದರ್ಜೆಗಳ ಸಂಘದ ಅಧ್ಯಕ್ಷರಾದ ಶ್ರೀ ರಾಮದಾಸ್ ಪ್ರಭು ಕಾರ್ಯದರ್ಶಿಗಳಾದ ಶ್ರೀ ದತ್ತಾತ್ರೇಯ ನಾಯ್ಕ, ಸುರೇಶ ಎಂ ಭಂಡಾರಿ, ರಮೇಶ ಭಂಡಾರ ಇತರರು ಹಾಜರಿದ್ದರು.