ಕಾರವಾರ: ಬಣ್ಣ‌ ಬಳಿದ ಹಾಗೂ ಪಿಒಪಿ ಗಣಪತಿ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡಿದರೆ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.

ನಗರದಾದ್ಯಂತ ವ್ಯಾಪಾರ ವಾಹಿವಾಟು ಜೋರಾಗಿದೆ. ಜನರು ಮಾರುಕಟ್ಟೆಗಳಲ್ಲಿ ತುಂಬಿ ಹೋಗಿದ್ದಾರೆ. ನಗರ ಸೇರಿದಂತೆ ಹಲವೆಡೆ ಈಗಾಗಲೇ ಗಣಪತಿ ಪ್ರತಿಷ್ಠಾಪನೆಗೆ ಪೆಂಡಾಲ್‌ ನಿರ್ಮಿಸಿ, ಅಲಂಕಾರ ಕಾರ್ಯಗಳನೆಲ್ಲಾ ಪೂರ್ತಿ ಗೊಳಿಸಿ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಮಳೆಯ ಅಬ್ಬರದ ನಡುವೆಯೂ ಹಬ್ಬದ ಸಂಭ್ರಮ ಹೆಚ್ಚಿದೆ.

RELATED ARTICLES  ಭಾರತ ಲಾಕ್ ಡೌನ್ ಹಿನ್ನೆಲೆ : ನಡೆಯಲ್ಲ ಕೆಕ್ಕಾರ ಜಾತ್ರೆ..!

ದೂರದೂರುಗಳಿಗೆ ಗಣಪತಿಯನ್ನು ಕೊಂಡೊಯ್ಯುವವರು ಗುರುವಾರದಿಂದಲೇ ಗ್ರಾಮಗಳಿಗೆ ಕರೆದೊಯ್ಯುವ ಕಾರ್ಯಕ್ಕೆ ಚಾಲನೆ ನೀಡಿದ್ದು,  ಸಾಗಾಟಕ್ಕೆ ವರುಣ ಅಡ್ಡಿಯಾಗುತ್ತಿರುವುದರಿಂದ ಬೆನಕನನ್ನು ಪ್ಲಾಸ್ಟಿಕ್‌  ಹೊದಿಕೆ ಯಲ್ಲಿ ಕೊಂಡೊಯ್ಯುವ ಪರಿಸ್ಥಿತಿ ಭಕ್ತರಿಗೊದಗಿದೆ.

RELATED ARTICLES  ಭಟ್ಕಳ: ಗ್ರಾ.ಪಂ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಕಂಪ್ಯೂಟರ್ ಆಪರೇಟರ್ ಗಳ ನೇಮಕಾತಿಗಾಗಿ ಮನವಿ

ಸಮುದ್ರದಲ್ಲಿ ವಿಸರ್ಜನೆ ಇಲ್ಲ :

ಬಣ್ಣ‌ ಬಳಿದ ಹಾಗೂ ಪಿಒಪಿ ಗಣಪತಿ ಮೂರ್ತಿಗಳನ್ನು ಸಮುದ್ರದಲ್ಲಿ ವಿಸರ್ಜನೆ ಮಾಡುವುದನ್ನು ಜಿಲ್ಲೆಯಾದ್ಯಂತ ನಿಷೇಧಿಸಲಾಗಿದೆ. ಈಗಾಗಲೇ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಸಿರುವ ಸಭೆಗಳಲ್ಲಿ ಗಣಪತಿ ಸೇವಾ ಸಮಿತಿಗಳಿಗೆ ಮಾಹಿತಿ ನೀಡಲಾಗಿದ್ದು, ಜಿಲ್ಲಾಡಳಿತ ದೊಂದಿಗೆ ಕೈ ಜೋಡಿಸುವಂತೆ ಸ್ಥಳೀಯ ಸಂಸ್ಥೆಗಳಿಗೆ ಪೊಲೀಸರು ಕರೆ ನೀಡಿದ್ದಾರೆ.