ಕಾರವಾರ: ಕೊರೋನಾ ಪಾಸಿಟೀವ್ ಬಂದಿರುವವರ ಫೋಟೋ ವಿಡಿಯೋವನ್ನು ಬಳಸುವುದು ಸರಿಯಲ್ಲ ಎಂಬ ಅಂಶವನ್ನು ಈ ಮೊದಲೇ ತಿಳಿಸಿದ್ದರೂ ಇದೀಗ ಆ ಬಗ್ಗೆ ಪ್ರಕರಣ ದಾಖಲಾಗಿದೆ.
ಗೋವಾದ ಮೆಡಿಸಿನ್ ಕಂಪೆನಿಯಲ್ಲಿ ದುಡಿಯುವ ವ್ಯಕ್ತಿಯಲ್ಲಿ ಕೊರೊನಾ ದೃಢಪಟ್ಟ ವಿಷಯಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬ ಆತನ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದು ಪ್ರಕರಣ ದಾಖಲಾಗಿದೆ.
ಕಳೆದ ಎರಡು ದಿನದ ಹಿಂದೆ ಗೋವಾದಲ್ಲಿದ್ದ ಜಿಲ್ಲೆಯ ವ್ಯಕ್ತಿಯಲ್ಲಿ ಕೊರೊನಾ ಇರುವ ಬಗ್ಗೆ ಗೋವಾ ಪ್ರಕಟಣೆ ನೀಡುತ್ತು. ಆತ ಕಾರವಾರದ ಮಾಜಾಳಿ ಗಡಿಯಿಂದಲೇ ಗೋವಾಕ್ಕೆ ತೆರಳಿದ್ದ. ಗೋವಾದಲ್ಲಿ ಕ್ವಾರಂಟೈನ್ ಇದ್ದ ಆತನಲ್ಲಿ ಸೋಂಕು ದೃಢಪಟ್ಟಿತ್ತು. ಫೋಟೊ ವೈರಲ್ ಆದ ಬಗ್ಗೆ ಆತ ಜಿಲ್ಲಾಧಿಕಾರಿಗೆ ಕರೆ ಮಾಡಿ ದೂರು ನೀಡಿದ್ದಾನೆ.