ಅಂಕೋಲಾ: ಕಾರವಾರ ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕರಾದ ರೂಪಾಲಿ ನಾಯ್ಕ ಅವರ ತಾಲ್ಲೂಕಿನ ಹಾರವಾಡ ಗ್ರಾಮ ಪಂಚಾಯ್ತಿಯ ಸಸ್ಯ ಪಾಲನಾ ಕ್ಷೇತ್ರಕ್ಕೆ ಬುಧವಾರ ಭೇಟಿ ನೀಡಿ ಕಾರ್ಮಿಕರಿಗೆ ದಿನಸಿ ಕಿಟ್, ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು.
ಶಾಸಕರಾದ ರೂಪಾಲಿ ನಾಯ್ಕ ಅವರು ಮಾತನಾಡಿ, ಕೊರೊನಾ (ಕೊವಿಡ್-19)ವೈರಸ್ ಇರುವುದರಿಂದ ಎಲ್ಲೆಡೆ ಸಮಸ್ಯೆಯಾಗುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು ಅರಣ್ಯಾಧಿಕಾರಿಗಳು ಕಾರ್ಮಿಕರಿಗೆ ದಿನಸಿ ಕಿಟ್ ವಿತರಿಸುತ್ತಿದ್ದು, ಇದು ಶ್ಲಾಘನೀಯವಾದ ಕಾರ್ಯ. ಅಲ್ಲದೆ, ಈ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗಬೇಕು. ಸಮುದ್ರ ತೀರದಲ್ಲಿ ಸಸ್ಯ ಪಾಲನ ಕ್ಷೇತ್ರ ನಿರ್ಮಿಸಿರುವುದು ಶ್ಲಾಘನೀಯ ಎಂದರು.
ಕಾರ್ಮಿಕ ಕಾರ್ಡ್ ಭರವಸೆ:
ಹಾರವಾಡ ಸಸ್ಯ ಪಾಲನಾ ಕ್ಷೇತ್ರದ ಮಹಿಳಾ ಕಾರ್ಮಿಕರು ಶಾಸಕರಲ್ಲಿ ಕಾರ್ಮಿಕ ಕಾರ್ಡ್ ಮಾಡಿಸಿಕೊಡುವಂತೆ ಮನವಿ ಮಾಡಿದರು. ತಕ್ಷಣ ಶಾಸಕರು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು.
ಜಿ.ಪಂ ಸದಸ್ಯ ಜಗದೀಶ್ ನಾಯ್ಕ, ಸುಮತಿ ಹರಿಕಂತ್ರ, ಗಣರಾಜ ಟಾಕಿಕರ್, ತುಕಾರಾಂ ಸಾದಿ, ಎಸಿಎಫ್ ಮಂಜುನಾಥ ನಾವಿ, ವಲಯ ಅರಣ್ಯ ಅಧಿಕಾರಿ ವಿ.ಪಿ ನಾಯ್ಕ, ಭವ್ಯಾ ನಾಯ್ಕ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ, ಸ್ಥಳೀಯ ಮುಖಂಡರು ಹಾಜರಿದ್ದರು.