ಕುಮಟಾ: ಕಾರ್ಮಿಕ ಇಲಾಖೆಯ ವತಿಯಿಂದ ನೀಡಲ್ಪಡುವ ಅಗತ್ಯ ದಿನಸಿ ಕಿಟ್‍ಗಳನ್ನು ಶಾಸಕ ದಿನಕರ ಶೆಟ್ಟಿ ಮಂಗಳವಾರ ತಾಲೂಕಿನ ಅಳಕೋಡ ಗ್ರಾಮ ಪಂಚಾಯತ ವ್ಯಾಪ್ತಿಯ ಉಪ್ಪಿನಪಟ್ಟಣ ಗ್ರಾಮದ 200 ಕ್ಕೂ ಅಧಿಕ ಬಡ ಕುಟುಂಬಗಳಿಗೆ ವಿತರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ ಸದಸ್ಯ ಗಜಾನನ ಪೈ, ಭೂತ್ ಅಧ್ಯಕ್ಷರು, ಸದಸ್ಯರು, ಕಾರ್ಯಕರ್ತರು, ಪ್ರಮುಖರಾದ ಶ್ರೀಧರ ಪೈ, ಕಾರ್ತಿಕ ಭಟ್ಟ, ವಿಷ್ಣು ಗೌಡ, ನೀಲೇಶ, ಅನಂತ ಶಾನಭಾಗ, ಮಹೇಶ ಭಂಡಾರಿ, ಮಂಜುನಾಥ ಗೌಡ, ಅನ್ವೇಷ ಸೇರಿದಂತೆ ಇನ್ನಿತರರು ಇದ್ದರು.