ಶಿರಸಿ: ಕರೋನಾ ಸಂಖ್ಯೆಯ ಲೆಕ್ಕಾಚಾರದಲ್ಲಿ ಹೇಳಬಹುದಾದ ಸುದ್ದಿಯಾಗಿದ್ದು ಇದು ಕರೋನಾ ಕಡಿಮೆ ಆಗಿರುವ ಸುದ್ದಿಯಲ್ಲ ಆದರೆ ಕರೋನಾ ಸಂಖ್ಯೆ ಉತ್ತರ ಕನ್ನಡದಲ್ಲಿ ಕಡಿಮೆಯಾಗಿರುವ ಸುದ್ದಿ ಅದು ಹೇಗೆ ಅಂತೀರಾ ಈ ವರದಿ ಓದಿ.
ಇಂದು ಕೊರೋನಾ ಸೋಂಕು ದೃಢಪಟ್ಟ ಒಂಬತ್ತು ಮಂದಿಯ ಪೈಕಿ ಇಬ್ಬರು ಉಡುಪಿ ಮೂಲದವರಾದ ಹಿನ್ನೆಲೆಯಲ್ಲಿ ಜಿಲ್ಲೆಯ ಸಕ್ರಿಯ ಸೋಂಕಿತರ ಸಂಖ್ಯೆಯಲ್ಲಿ ಎರಡು ಪ್ರಕರಣವನ್ನು ಕಡಿತಗೊಳಿಸಲಾಗಿದೆ. ಅಂದರೆ ಅವರನ್ನು ಉಡುಪಿಯ ಜಿಲ್ಲೆಯ ಸಕ್ರಿಯ ಕೊರೋನಾ ಪ್ರಕರಣದಲ್ಲಿ ಸೇರಿಸಲಾಗಿದೆ. ಈ ಬಗ್ಗೆ ರಾಜ್ಯ ಬುಲೆಟಿನ್ ನಲ್ಲಿ ಪ್ರಕಟಣೆ ಹೊರಡಿಸಲಾಗಿದೆ.
ಶಿರಸಿಯ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದ 9 ಜನಕ್ಕೆ ಕೊರೋನಾ ಸೋಂಕು ಇರುವುದು ಇಂದು ದೃಢಪಟ್ಟಿತ್ತು. ಈ ಪೈಕಿ ಸೋಂಕು ದೃಢಪಟ್ಟ ತಾಯಿ ಹಾಗೂ ಒಂದು ವರ್ಷದ ಗಂಡು ಮಗು ಮೂಲತಃ ಉಡುಪಿ ಜಿಲ್ಲೆಯವರಾದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಸಕ್ರಿಯ ಸೋಂಕಿತರ ಪಟ್ಟಿಗೆ ಅವರನ್ನು ಸೇರಿಸಿ, ಜಿಲ್ಲೆಯ ಸೋಂಕಿತರ ಪಟ್ಟಿಯಿಂದ ಕೈಬಿಡಲಾಗಿದೆ.