ದಾಂಡೇಲಿ: ಆಸ್ಪತ್ರೆ ಕ್ವಾರಂಟೈನ್‍ನಲ್ಲಿದ್ದ 62 ವರ್ಷದ ವೃದ್ದೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಇತ್ತೀಚೆಗೆ ಪಟ್ಟಣದಲ್ಲಿ ಓರ್ವ ಯುವಕನೆಗೆ ಕೊರೊನಾ ಸೋಂಕು ತಗುಲಿದ್ದು, ಆತನ ಅಜ್ಜಿ ಈಕೆ ಎಂದು ತಿಳಿದುಬಂದಿದೆ. ಕೊರೊನಾ ದೃಢಪಟ್ಟ ಯುವಕ ಸಂಪರ್ಕದಲ್ಲಿ ಈಕೆ ಇದ್ದಳು ಎಂದು ಆಸ್ಪತ್ರೆಯಲ್ಲಿ ಕ್ವಾರಂಟೈನ್ ಮಾಡಿದ್ದರು. ಇಂದು ಬೆಳಗ್ಗಿನ ಜಾವದಲ್ಲಿ ಆಸ್ಪತ್ರೆಯ ಕಿಟಕಿಗೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಕುರಿತು ದಾಂಡೇಲಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.