ಹೊನ್ನಾವರ: ಮುಂಬೈನಲ್ಲಿ ಉದ್ಯಮಿಯಾಗಿ ಅಲ್ಲೇ ನೆಲೆಸಿದ್ದ ಹೊನ್ನಾವರ ಮೂಲದ ವ್ಯಕ್ತಿ ಹೊನ್ನಾವರದಲ್ಲಿ ಹೋಟೆಲ್ ಕ್ವಾರಂಟೈನ್ ನಲ್ಲಿದ್ದ ಇಂದು ಈತನಿಗೆ ಇಂದು ಕೊರೋನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಒಟ್ಟು 64 ಸೋಂಕಿತರಿದ್ದಾರೆ. ಈ ಪೈಕಿ 52 ಮಂದಿ ಸಕ್ರಿಯ ಸೋಂಕಿತರಾಗಿದ್ದಾರೆ.
ಇವರು ಮೇ 15ಕ್ಕೆ ಪತ್ನಿ ಹಾಗೂ ಐದೂವರೆ ವರ್ಷದ ಮಗನೊಂದಿಗೆ ಹೊನ್ನಾವರಕ್ಕೆ ಬಂದಿದ್ದರು. ಹೊರ ರಾಜ್ಯದಿಂದ ಬಂದಿದ್ದ ಕಾರಣ ಚೆಕ್ ಪೋಸ್ಟ್ ನಿಂದಲೇ ಇವರನ್ನು ನೇರವಾಗಿ ಹೋಟೆಲ್ ಕ್ವಾರಂಟೈನ್ ಗೆ ನೀಡಲಾಗಿತ್ತು. ಸದ್ಯ ಪತಿಯ ಗಂಟಲಿನ ದ್ರವದ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಪತ್ನಿ ಹಾಗೂ ಮಗನ ವರದಿ ಬರಬೇಕಿದೆ.