ನಗುವದು ಸಹಜ ಧರ್ಮ ನಗಿಸುವದು ಪರಧರ್ಮ ಎಂಬ ಹಿರಿಯರ ಸಾಲು ಅರ್ಥಪೂರ್ಣವಾಗಿದೆ. ಮನುಷ್ಯ ಸಂಘ ಜೀವಿ. ಅವನಿಗೆ ನಗು,ಅಳು,ಇವೆಲ್ಲ ಜೀವನದ ಅಂಗಗಳು.ನಗುವಾಗ ಹಿಗ್ಗುವ ಈತ ಅಳುವಾಗ ಮುದುಡುತ್ತಾನೆ.ಜೀವನದ ಬಹುಭಾಗ ನಗುವಿನಿಂದ ಕೂಡಿರಲೆಂದು ಜನರು ಬಯಸುತ್ತಾರೆ. ನಗು ಮುಖದ ಅಂದವನ್ನು ಹೆಚ್ಚಿಸಿ ಮನುಷ್ಯರಿಗೆ ಮೆರುಗು ನೀಡುತ್ತದೆ. ಮಗು ಸಹಜವಾಗಿ ನಗಬೇಕು.ಅದರ ಸ್ನಾಯುಗಳು
ಬೆಳವಣಿಗೆಯಾಗಲು,ಮನಸಿನಲ್ಲಿ ಸೌಂದರ್ಯದ ಪ್ರಜ್ಞೆ ಮೂಡಲು,ಹಿತದ ವಾತಾವರಣದ ಸಿಹಿ ಅನುಭವವಾಗಲು ನಗು ಬೇಕು. ನಗುವಿರದೆ ಜೀವನವೇ ಇರಲಾರದು.ನಗು ಒಂದಲ್ಲ ಒಂದು ಕಾರಣಕ್ಕೆ ನಮ್ಮನ್ನು ಅವರಿಸಿಕೊಂಡು ಬಿಡುತ್ತದೆ. ಆ ನಗುವಿನಲ್ಲಿ ನಮ್ಮ ಕಷ್ಟ ದುಃಖ ಇವೆಲ್ಲ ಕರಗಿ ಉತ್ಸಾಹ ಮೂಡುತ್ತದೆ. ನಗಿಸುವ ಹಾಸ್ಯ ಚಟಾಕಿ ನಮಗಿಷ್ಟ.ನಗಿಸುವ ಹಾಸ್ಯಮಾಡುವ ಸಂದರ್ಭಕ್ಕೆ ಕಾಯುತ್ತಿರುತ್ತೇವೆ.ಎಂತಾ ಕೋಪಿಯೂ ನಗುವ ವಾತಾವರಣ ಕಲ್ಪಿಸಿದರೆ ಕೋಪ ಬಿಟ್ಟು ಎಲ್ಲರ ಜೊತೆ ನಗುವಿನಲ್ಲಿ ಒಂದಾಗಿಬಿಡುತ್ತಾನೆ.ಕಾರಣ ನಗು ದೇವರ ವರ. ಮುಗುಳ್ನಗು ಬೀರುತ್ತ ಸಂತಸ ಮನದಲ್ಲಿ ಮಾಡುವ ಕೆಲಸ ಶ್ರದ್ದಾಪೂರ್ವಕವಾಗಿ ಎಲ್ಲರಿಗೂ ಮೆಚ್ಚುಗೆಯಾಗಿ ಸಾರ್ಥಕತೆಯನ್ನು ಪಡೆಯುತ್ತದೆ. ತಾಳ್ಮೆ,ನಗು,ಮನುಷ್ಯನಿಗೆ ಎದುರಿಸುವ ದೈರ್ಯವನ್ನು,ಸಮಾದಾನದ ಪರಿಸರದಲ್ಲಿ ನಿರ್ಮಿಸುತ್ತದೆ. ಯಾವುದೆ ಕಠಿಣ ಶ್ರಮವೂ ನಗು ಹಾಸ್ಯದಲ್ಲಿ ಕ್ಷಣದಲ್ಲಿ ನಿರಾಯಾಸವಾಗಿ ಕೈಗೂಡುತ್ತದೆ. ಅಲ್ಲಿ ಸಮಸ್ಯೆ ಪರಿಹಾರವಾಗಿ ಮತ್ತೆ ತಾನು ಮುಂದಿನ ಕೆಲಸಕ್ಕೆ ಕೈ ಹಾಕಬಹುದೆಂಬ ಬಾವ ಒಡಮೂಡುತ್ತದೆ. ಕಾರಣ ಮಗುವಿರುವಾಗಲಿಂದಲೆ ನಗು ನಗುತ್ತ ಸಮಸ್ಯೆ ಪರಿಹಾರ ಮಾಡುವ ಶಕ್ತಿ ಬೆಳೆಯಬೇಕು. ಮಗುವಿಗೆ ಒತ್ತಡ ಬೀಳದಂತೆ
ಮನಸ್ಸಿಗೆ ಘಾಸಿಯಾಗದಂತೆ ಮನೆಪಾಟವಾಗಲೀ,ಶಾಲಾಕಲಿಕೆಯಾಗಲೀ ನಡೆಯಬೇಕು.ಜೀವನದ ಪಾಠವನ್ನು ಮಗು ಒತ್ತಡದಲ್ಲಿ ಸಿಲುಕದಂತೆ ನಿಭಾಯಿಸುವದನ್ನು ಕಲಿಯಬೇಕು.ಅದರ ಅಸಕ್ತಿಕರ ವಿಷಯ,ನೆಲೆಗಟ್ಟನ್ನು ಗುರುತಿಸಿ ಅ ದಿಶೆಯಲ್ಲಿ ಅದಕ್ಕೆ ಶಿಕ್ಷಣ ನೀಡಬೇಕು. ನಗುನಗುತ್ತಿರಿ.ಸುಂದರವಾಗಿರಿ.ಸುಗಮಬಾಳ್ವೆಯಲ್ಲಿರಿ.ಜೀವನ ಸಾಧನೆಯಲ್ಲಿ ಹಗುರಾಗಿ ನವಿರಾಗಿ ಸಾರ್ಥಕತೆಯ ಕಾಣಿ

RELATED ARTICLES  ಹೊನ್ನಾವರ ಮಾಗೋಡಿನ ಬಾಲಕಿಗೆ ಚೂರಿ ಇರಿತ ಪ್ರಕರಣಕ್ಕೆ ಬಿಗ್ ಟ್ವಿಸ್ಟ!

ಕಲ್ಪನಾಅರುಣ
ಬೆಂಗಳೂರು