ಕಾರವಾರ: ಜಿಲ್ಲೆಯ ಎಲ್ಲಾ ಕೊರೊನಾ ಸೋಂಕಿತರು ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಕೋವಿಡ್-19 ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟೂ 52 ಸೋಂಕಿತರ ಪೈಕಿ 20 ಮಂದಿ ಗುಣಮುಖರಾಗಿದ್ದಾರೆ. ಅವರನ್ನು ಶನಿವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಇದು ಉತ್ತರ ಕನ್ನಡದ ಜನತೆಗೆ ಸಂತಸ ತರುವ ವಿಷಯವಾಗಿದೆ.
ಗುಣಮುಖರಾದ ಬಹುತೇಕ ಎಲ್ಲರೂ ಭಟ್ಕಳ ಮೂಲದವರಾಗಿದ್ದು, ಜಿಲ್ಲಾಧಿಕಾರಿ ಡಾ. ಹರೀಶ್‌ಕುಮಾರ್, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ರೋಷನ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜ್ ಸಮ್ಮುಖದಲ್ಲಿ ಗುಣಮುಖರಾದವರನ್ನು ಬಿಡುಗಡೆ ಮಾಡಲಾಗುತ್ತಿದೆ. ಬಿಡುಗಡೆಯಾದವರನ್ನು ಮತ್ತೆ 14 ದಿನ ಹೊಟೇಲ್ ಕ್ವಾರಂಟೈನ್ ನಲ್ಲಿಟ್ಟು ನಂತರ ಅವರನ್ನು ಮನೆಗೆ ಕಳುಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.