ಶಿರಸಿ: ಆರೋಗ್ಯದ ಹಿತಕ್ಕೆಂದು ಕಷಾಯ ಕುಡಿದ ಪರಿಣಾಮ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೆ ತರುವಾಗ ಮಗ ಮೃತಪಟ್ಟು, ತಂದೆ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ದುರ್ಘಟನೆ ನಡೆದಿದೆ.
ನಗರದ ರಾಮನ ಬೈಲಿನ ಫ್ರಾನ್ಸಿಸ್ ರೇಪೋ ಮೃತಪಟ್ಟ ದುರ್ದೈವಿಯಾಗಿದ್ದು, ನೆಕ್ಲಾ ಅಂಥೋನಿ ಗಂಭೀರವಾಗಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದಾರೆ.
ಆರೋಗ್ಯಕ್ಕೆ ಒಳ್ಳೆಯದು ಎಂದು ಇವರಿಬ್ಬರು ಯಾವುದೋ ಬೇರಿನಿಂದ ತಯಾರಿಸಿದ ಕಷಾಯ ಸೇವನೆ ಮಾಡಿದ್ದಾರೆ. ಇದರಿಂದಾಗಿ ಇಬ್ಬರು ಅಸ್ವಸ್ಥಗೊಂಡಿದ್ದರು. ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ಸಾಗಿಸುವ ವೇಳೆ ಮಗ ಕೊನೆಯುಸಿರೆಳೆದಿದ್ದಾನೆ.