ಸಿದ್ದಾಪುರ : ಇಂದು ಕೊರೋನಾ ರಣಕೆಕೆ ಮುಂದುವರಿದಿದ್ದು ಉತ್ತರ ಕನ್ನಡದಲ್ಲಿ ತಾಲೂಕಿನ 52 ವರ್ಷದ ವ್ಯಕ್ತಿಗೆ, ಹೊನ್ನಾವರದ 24 ವರ್ಷದ ಯುವಕನಿಗೆ, ಯಲ್ಲಾಪುರದ 4, 9 ವರ್ಷದ ಬಾಲಕರು, 12 ವರ್ಷದ ಬಾಲಕಿ ಹಾಗೂ 26 ವರ್ಷದ ಯುವಕನಲ್ಲಿ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಖಚಿತಪಡಿಸಿದೆ.
ಎಲ್ಲರೂ ಒಂದು ವಾರದ ಹಿಂದೆ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದಿದ್ದು, ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್ ನಲ್ಲಿಡಲಾಗಿತ್ತು. ಇಷ್ಟು ದಿನದವರೆಗೆ ಸಿದ್ದಾಪುರ ತಾಲೂಕಿಗೆ ಕೊರೋನಾ ಕಾಲಿಟ್ಟಿರಲಿಲ್ಲ. ಇದೀಗ ಸಿದ್ದಾಪುರ ಮೂಲದ ವ್ಯಕ್ತಿಯಲ್ಲೂ ಸೋಂಕು ದೃಢಪಡುವ ಮೂಲಕ ಜಿಲ್ಲೆಯ ಸೋಂಕಿತ ತಾಲೂಕುಗಳ ಪಟ್ಟಿಗೆ ಸೇರ್ಪಡೆಯಾಗಿದೆ.