ಸಿದ್ದಾಪುರ: ಹೆಂಡತಿಗೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಮಾನಸಿಕವಾಗಿ ನೊಂದು ಕುಡಿತಕ್ಕೆ ದಾಸನಾಗಿ ಅರಿಯದೆ ವಿಷ ಪದಾರ್ಥ ಸೇವನೆ ಮಾಡಿ ಮೃತಪಟ್ಟ ಘಟನೆ ವರದಿಯಾಗಿದೆ.
ಬೀರಾ ಬಡಗಿ ಎನ್ನುವವನೇ ಆ ಮೃತ ವ್ಯಕ್ತಿ. ಈತ ಮೊದಲಿನಿಂದಲು ಮದ್ಯದ ದಾಸನಾಗಿದ್ದ. ಹೆಂಡತಿಗೆ ಪಾರ್ಶ್ವವಾಯು ಆದ ಮೇಲೆ ಮಾನಸಿಕ ಖಿನ್ನತೆಗೆ ಒಳಗಾಗಿ ಮದ್ಯ ಕುಡಿಯುವುದನ್ನು ಹೆಚ್ಚಿಸಿದ್ದ. ಈ ನಡುವೆ ವಿಷ ಪದಾರ್ಥ ಸೇವಿಸಿ ಅಸ್ವಸ್ಥನಾಗಿ ಶಿರಸಿ ಆಸ್ಪತ್ರೆ ಸೇರಿದ್ದ ಈತ ಚಿಕಿತ್ಸೆ ಫಲಿಸಲದೆ ಮೃತಪಟ್ಟಿದ್ದಾನೆ.