ಕುಮಟಾ:ಮಹಾರಾಷ್ಟ್ರದಿಂದ ವಾಪಸ್ಸಾದ ಕಾರವಾರದ 35 ವರ್ಷದ ಮಹಿಳೆಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ.
ಇದರ ಜೊತೆಗೆ ದಾಂಡೇಲಿ ಮೂಲದ ವ್ಯಕ್ತಿಯಲ್ಲಿಯೂ ಸೋಂಕು ದೃಢವಾದ ಬಗ್ಗೆ ಹೆತ್ತ ಬುಲೆಟಿನ್ ನಲ್ಲಿ ಹೇಳಲಾಗಿದೆ.
ಕಳೆದ ಅನೇಕ ದಿನಗಳ ನಂತರ ಕುಮಟಾದಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿದ್ದು,ಕುಮಟಾ ಮೂಲದ ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಒಂದೇ ಕುಟುಂಬದ ನಾಲ್ವರಲ್ಲಿ ಸೋಂಕು ದೃಢವಾಗಿದೆ ಎಂಬ ಬಗ್ಗೆ ಸುದ್ದಿಗಳು ಹರಿದಾಡಿದ್ದವು.
ಮಹಾರಾಷ್ಟ್ರದಿಂದ ವಾಪಸ್ಸಾಗಿದ್ದ ಒಂದೇ ಕುಟುಂಬದ ನಾಲ್ವರು ಪಟ್ಟಣದಲ್ಲಿ ಸಾಂಸ್ಥಿಕ ಕ್ವಾರಂಟೈನ್ ನಲ್ಲಿದ್ದವರು ಅವರಿಗೆ ನಾಲ್ವರಿಗೂ ಸೋಂಕು ಬಂದಿದೆ ಎಂಬ ಬಗ್ಗೆ ಸುದ್ದಿಗಳು ಹರಿದಾಡುತ್ತಿತ್ತು ಆದರೆ ಸರ್ಕಾರದ ಹೆಲ್ತ ಬುಲೆಟಿನ್ ನಲ್ಲಿ ಇಬ್ಬರಿಗೆ ಸೋಂಕು ದೃಢವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಜನತೆ ನಾಳಿನ ಬುಲೆಟಿನ್ ಗಾಗಿ ಕಾದು ಕುಳ್ಳುವಂತಾಗಿದೆ.