ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗಟಾ ಗ್ರಾಮ ಪಂಚಾಯತಗೆ ಸಂಬಂಧಿಸಿದ ಗ್ರಾಮ ಕೆಂಕಣಿ ಶಿವಪುರ ಇರುತ್ತಿದ್ದು, ಪುರಾತನ ಕಾಲದಿಂದಲೂ ಶಿವನ ಕ್ಷೇತ್ರ ವೆಂದು ಪ್ರಸಿದ್ದಿ ಪಡೆದು ಸಾವಿರಾರು ವರ್ಷಗಳ ಹಿಂದಿನಿಂದ ಗೋಕರ್ಣದ ಪವಿತ್ರ ಕ್ಷೇತ್ರಕ್ಕಿಂತಲೂ ಒಂದು ದೇವರ ವಿಗ್ರಹ ಹೆಚ್ಚಿಗೆ ಇರುವುದು ಅನೇಕ ಹಿರಿಯರಿಂದ ಕೇಳಿದು ಇರುತ್ತದೆ. ಮತ್ತು ಈ ಗ್ರಾಮಗಳು ಶ್ರೀರಾಮಚಂದ್ರನ ಅನುಗ್ರಹ ಪಡೆದ ಗ್ರಾಮಗಳೆಂದು ತಿಳಿಯುತ್ತದೆ. ಯಾಕೆಂದರೆ ಈ ಗ್ರಾಮದಲ್ಲಿ ರೈತರು ಬೆಳೆದ ಬಾಳೆಯ ತೋಟದಲ್ಲಿ ವಾನರರ ಸೇನೆಗಳು ಬಾಳೆಕೊನೆಯ ಮೇಲೆ ಆಟವಾಡಿದ್ದು ಕುಳಿತುಕೊಂಡಿದ್ದು ನಾವು ಕೂಡ ನೋಡಿದ್ದೇವೆ. ಈ ಹಿಂದೆ ಒಂದು ಬಾಳೆಯ ಕಾಯಿಯನ್ನು ತಿಂದಿದ್ದು ಇದ್ದಿಲ್ಲ. ಆದ್ದರಿಂದ ಶ್ರೀರಾಮನ ವಾಕ್ಯವೇ ಸರಿ ಇನ್ನೂ ಎರಡು ಶಿವನ ದೇವಾಲಯವಿದ್ದು ಒಂದು ಜಡೇಶ್ವರ, ಇನ್ನೊಂದು ಈಶ್ವರ ರಾಜ್ಯದ ಯಾವುದೇ ಊರಲ್ಲಿ ಎರಡು ಶಿವನ ದೇವಾಲಯ ಇರುವುದಿಲ್ಲ. ಶಿವನ ದೇವಾಲಯದಲ್ಲಿ ಎರಡು ನಂದಿ ವಿಗ್ರಹ ಇರುವುದು ವಿಶೇಷ ನನಗೆ ತಿಳಿದಂತೆ ಎಲ್ಲಿಯೂ ಕೂಡ ಎರಡು ನಂದಿ ಇರುವುದಿಲ್ಲ. ಇದೊಂದು ಬಹಳ ವಿಶೇಷ ಮತ್ತು ಶಿವನ ಅಭಿಷೇಕಕ್ಕೆ ನೀರು ಶಿವನ ದೇವಸ್ಥಾನದ ಮುಂದುಗಡೆ ಎರಡು ಪೂಟು, ವ್ಯಾಸದ ಒಂದು ಬಾವಿ ಇದ್ದು, ಅದರಲ್ಲಿ ಯಾವಾಗಲೂ ನೀರು ಶಿವನ ಅಭಿಷೇಕಕ್ಕೆ ಸಿಗುತ್ತಾ ಇರುತ್ತದೆ. ಪಕ್ಕದಲ್ಲಿ ಶಿವನ ದೇವಾಲಯದ ಹಿಂದುಗಡೆ ದಕ್ಷಿಣ ಕಾಳಿ ದೇವಿ ಇರುತ್ತದೆ. ಆಕೆಯು ಕೂಡ ನಂಬಿದ ಭಕ್ತರ ಸಂಕಷ್ಟಗಳನ್ನು ಬೇಡಿಕೊಂಡರೆ ಕಷ್ಟಗಳನ್ನು ಹೊಡೆದೊಡಿಸುವ ಮಹಾದಕ್ಷಿಣಕಾಳಿ ಇರುವ ಜಾಗ ಕೆಂಕಣಿಶಿವಪುರ ಗ್ರಾಮ, ಇಂತಹ ಮಹತ್ವವುಳ್ಳ ಪ್ರಸಿದ್ಧ ಕ್ಷೇತ್ರ ಎಂದರೆ ಕೆಂಕಣಿಶಿವಪುರ ಕ್ಷೇತ್ರ ಹಾಗೂ ಪೂರ್ವ ದಿಕ್ಕಿನಲ್ಲಿ ಒಂದು ಸಾವಿರ ಮೀಟರ ಅಂತರದಲ್ಲಿ ಕುಮಟಾ ತಾಲೂಕಿನ ಕೂಡುವ ಖಂಡಗಾರ ಕ್ರಾಸ್ ಇದ್ದು ಆ ಕ್ರಾಸ್ ಶ್ರೀರಾಮನ ಬಿಲ್ಲು ಬಾಣದಂತೆ ಇದೆ. ಆದ್ದರಿಂದ ಆ ಕ್ರಾಸ್‍ಗೆ ಬಿಲ್ಲುಬಾಣ ಕ್ರಾಸ್ ಎಂತಾ ಹೆಸರಿಡಲಾಗಿದೆ. ದಿನಾಂಕ 29-05-2020 ರಂದು ಶ್ರೀ ಹೊಸಬಣ್ಣ ನಾಯಕ ಆಂದ್ಲೆ (ಸಾಮಾಜಿಕ ಕಾರ್ಯಕರ್ತರು) ಇವರ ಸಹಭಾಗಿತ್ವದಲ್ಲಿ ಊರ ನಾಗರಿಕರೊಂದಿಗೆ ಬಿಲ್ಲುಬಾಣ ಫಲಕ ಉದ್ಘಾಟಣೆಗೊಂಡಿದೆ. ಶೀವು ಗೌಡ ಶಿವಪುರ, ಎನ್, ರಾಮು ಹಿರೇಗುತ್ತಿ, ಆದರ್ಶ ರಮಾಕಾಂತ ನಾಯಕ ಖಂಡಗಾರ. ರವಿ ನಾರಾಯಣ ನಾಯಕ. ಉಪಸ್ಥಿತರಿದ್ದರು.

ವರದಿ: ಎನ್. ರಾಮು ಹಿರೇಗುತ್ತಿ

RELATED ARTICLES  ಗೋಕರ್ಣ ಸಮುದ್ರದಲೆಗೆ ಕೊಚ್ಚಿ ಹೋದ ವ್ಯಕ್ತಿಯ ಶವ ಕಾಗಾಲ ಸಮುದ್ರ ತೀರದಲ್ಲಿ ಪತ್ತೆ