ಅರುಣ ಚೆನ್ನಪ್ಪ ಮಣಕೀಕರ್ ಅವರು ಕಳೆದ ಹಲವಾರು ವರ್ಷಗಳಿಂದ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ.ಈ ಸಂದರ್ಭದಲ್ಲಿ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ವತಿಯಿಂದ ಪ್ರತಿವರ್ಷವೂ ಪರೀಕ್ಷೆಗಳನ್ನು ಸ್ವಯಂ ಮುತುವರ್ಜಿಯಿಂದ ಸಂಘಟಿಸಿ ಸಾವಿರಾರು ಮಂದಿ ಹಿಂದಿ ಭಾಷೆಯ ತತ್ಸಮಾನ ಪದವಿ ಪಡೆಯುವಂತೆ ಉಪಕಾರ ಮಾಡಿದ್ದಾರೆ.ಶಿಸ್ತು ಮತ್ತು ಸಮಯ ಪ್ರಜ್ಞೆಗೆ ಹೆಸರಾದ ಇವರು ಹಲವಾರು ಸಂಘಟನೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
ತಾಲೂಕಿನ ಹಿಂದುಳಿದ ಗ್ರಾಮೀಣ ಪ್ರದೇಶವಾಗಿದ್ದ ದೀವಗಿಯಲ್ಲಿ ಡಿ ಜೆ ವಿ ಎಸ್ ಪ್ರೌಢಶಾಲೆಯನ್ನು ಆರಂಭಿಸುವಲ್ಲಿ ವಿಶೇಷ ಪ್ರಯತ್ನ ನೆಡೆಸಿ ಅದರ ಸಂಸ್ಥಾಪಕ ಮುಖ್ಯೋಪಾಧ್ಯಾಯರಾಗಿ ಸೇವೆಸಲ್ಲಿಸಿದ್ದಾರೆ.ದಿ ಯೋಧಾ ಕ್ರೆಡಿಟ್ ಸೊಸೈಟಿಯ ವ್ಯವಸ್ಥಾಪಕರಾಗಿ ,ಕೊಂಕಣಿ ಪರಿಷತ್ ಕುಮಟಾದ ಕಾರ್ಯದರ್ಶಿಯಾಗಿ ಉತ್ತರಕನ್ನಡ ಭಂಡಾರಿ ಸಮಾಜೋನ್ನತಿ ಸಂಘ ಶಾಖೆ ಕುಮಟಾದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿರುವ ಇವರು ಸಂಘಟನಾ ಚತುರರೂ ಆಗಿದ್ದಾರೆ.ವಿಶ್ರಾಂತ ಜೀವನದಲ್ಲಿ ಸಾಮಾಜಿಕ ಸೇವೆಯನ್ನು ಇನ್ನೂ ಪರಿಣಾಮಕಾರಿ ನಿರ್ವಹಿಸುವ ಮನಸ್ಥಿತಿ ಹೊಂದಿರುವ ಮಣಕೀಕರ್ ಅವರು ಇಂದು ಸೇವಾ ನಿವೃತ್ತಿಯನ್ನು ಹೊಂದಿದ್ದು ಅವರ ಸಹುದ್ಯೋಗಿಗಳು ಭಾರವಾದ ಮನಸ್ಸಿನಿಂದ ಅವರನ್ನು ಬೀಳ್ಕೊಟ್ಟಿದ್ದಾರೆ.