ಬೆಂಗಳೂರು : ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಶಿವಾನಂದ ಹೆಗಡೆ ಕಡತೋಕಾ ಮತ್ತು ರಾಜ್ಯ ಕಿಸಾನ್ ಕಾಂಗ್ರೆಸ್ ಪದಾಧಿಕಾರಿ ,ಜಿಲ್ಲಾ ಪಂಚಾಯತ್ ಸದಸ್ಯ, ಉದ್ಯಮಿ ಶ್ರೀ ದೀಪಕ್ ನಾಯ್ಕ್ ಮಂಕಿ, ಶ್ರೀ ಡಿ ಕೆ ಶಿವಕುಮಾರ್ ರವರು ಕರೆದ ರಾಜ್ಯ ಕಿಸಾನ್ ಕಾಂಗ್ರೆಸ್ ಸಭೆಗೆ ಹಾಜರಾಗಿ . ಶ್ರೀ ಶಿವಾನಂದ ಹೆಗಡೆಯವರು KPCC ಗೆ ವೈಯ್ಯಕ್ತಿಕವಾಗಿ 50000ರೂ ಚೆಕ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಿವಾನಂದ ಹೆಗಡೆಯವರು KPCC ಯ ನೂತನ ಅಧ್ಯಕ್ಷರಾಗಿ ಪ್ರಭಾವಿ,ಜನಪ್ರಿಯ ಹಾಗೂ ಗ್ಲಾಮರಸ್ ನಾಯಕ ಶ್ರೀ ಡಿ ಕೆ ಶಿವಕುಮಾರ್ ರವರು ಅಧಿಕಾರ ವಹಿಸಿಕೊಂಡ ಮೇಲೆ KPCC ನಿರಂತರ ಚಟುವಟಿಕೆಯ ಕೆಂದ್ರ ಬಿಂದು. ಸದಾ ಜನ ಪ್ರವಾಹ. ಪ್ರಸ್ತುತ ಸಂದರ್ಭದಲ್ಲಿ covid-19 ಭೀಕರ ಸಾಂಕ್ರಾಮಿಕ ರೋಗದಿಂದಾಗಿ ಜಗತ್ತಿನ ಹಲವೆಡೆಯಂತೆ ಕರ್ನಾಟಕವೂ ಸ್ತಬ್ಧ. ಆರ್ಥಿಕ ಚಟುವಟಿಕೆಗಳು ಶೂನ್ಯಕ್ಕೆ. ರೈತರು ಕಾರ್ಮಿಕರು ಸೇರಿದಂತೆ ಲಕ್ಷಾಂತರ ಕುಟುಂಬಗಳು ಕಂಗಾಲಾಗಿದ್ದ ಆ ಸಂದರ್ಭದಲ್ಲಿ ಸರ್ಕಾರವಿನ್ನೂ ಇವರಿಗೆ ನೆರವು ನೀಡಲು ಧಾವಿಸದಿದ್ದುದನ್ನು ಕಂಡು ಇವರುಗಳಿಗೆ ಸಹಾಯ ನೀಡಿ, ಧೈರ್ಯ ತುಂಬಲು ಮೊಟ್ಟ ಮೊದಲು ಎಂಟ್ರಿ ನೀಡಿದ್ದೇ, ಟ್ರಬಲ್ ಶೂಟರ್ ಖ್ಯಾತಿಯ ಶ್ರೀ ಡಿ ಕೆ ಶಿವಕುಮಾರ್. ನೇರವಾಗಿ ರೈತರುಗಳ ಜಮೀನಿಗೆ ಧಾವಿಸಿ ಹಣ್ಣು ತರಕಾರಿ ಮುಂತಾದ ಬೆಳೆಗಳನ್ನು ಖರೀದಿಸಿದ್ದಲ್ಲದೆ ಕೂಡಲೇ ಸರ್ಕಾರ ಇವರ ನೆರವಿಗೆ ಧಾವಿಸುವಂತೆ ಎಚ್ಚರಿಸಿ, ಕಾರ್ಮಿಕರು ಮತ್ತು ಇತರರಿಗೆ ಒಂದು ಬಾರಿಗೆ ಉಚಿತ ಪ್ರಯಾಣ ಕಲ್ಪಿಸಲು ನೆರವಾಗಿದ್ದು ಇದೇ ಟ್ರಬಲ್ ಶೂಟರ್. ನಿರ್ಗತಿಕ ಕುಟುಂಬಗಳಿಗೆ ಸಹಾಯ ನೀಡಿ ಆಹಾರ ಧಾನ್ಯ, ಊಟ ವಿತರಿಸಿ ಮಾನವೀಯತೆ ಮೆರೆದು ರಾಜ್ಯಾದ್ಯಂತ ಅಪಾರ ಗೌರವ ಗಳಿಸಿದ್ದು ಇದೇ ಡಿ ಕೆ ಶಿವಕುಮಾರ್ ಎಂದು ಅಭಿಪ್ರಾಯಪಟ್ಟರು.