ಯಲ್ಲಾಪುರ : ವಾಹನವೊಂದರಲ್ಲಿ ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ಮೂರು ಎತ್ತುಗಳನ್ನು ರಕ್ಷಣೆ ಮಾಡಿರುವ ಪೊಲೀಸರು, ವಾಹನದೊಂದಿಗೆ ಮೂವರನ್ನು ವಶಕ್ಕೆ ಪಡೆದಿದ್ದಾರೆ.

ಬೊಲೆರೋ ಪಿಕ್ಅಪ್ ವಾಹನದಲ್ಲಿ ಮೂರು ದಷ್ಟಪುಷ್ಟವಾದ ಎತ್ತುಗಳು ಹುಬ್ಬಳ್ಳಿ ಕಡೆಯಿಂದ ಭಟ್ಕಳ ಕಡೆಗೆ ಸಾಗಿಸುತ್ತಿದ್ದಾಗ ಗುರುವಾರ ಮಧ್ಯರಾತ್ರಿ ಯಲ್ಲಾಪುರ ಪಟ್ಟಣ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 63ರ ಜೋಡುಕೆರೆ ಬಳಿ ಪಿಎಸ್ಐ ಶ್ರೀಧರ್ ಎಸ್ ಆರ್ ಹಾಗೂ ಸಿಬ್ಬಂದಿಗಳು ವಾಹನ ತಪಾಸಣೆ ನಡೆಸಿ ಜಾನುವಾರುಗಳನ್ನು ವಶಕ್ಕೆ ಪಡೆದು ಮೂವರನ್ನು ಬಂಧಿಸಿದ್ದಾರೆ .

RELATED ARTICLES  ಗೋಕರ್ಣದಲ್ಲಿ ಗೋ ಕಳ್ಳರ ಹಾವಳಿ: ಎಚ್ಚೆತ್ತುಕೊಳ್ಳಬೇಕಿದೆ ಅಧಿಕಾರಿಗಳು.

ಬೆಳಗಾವಿಯ ನಿವಾಸಿಗಳಾದ ರಾಜು ಮಂಗು ಬಾಂಡ್ಗೆ(38), ತೌಫಿಕ್ ಗೌಸ್ ಬೇಪಾರಿ (19), ಹಾಗೂ ಸಲೀಂ ಗಪೂರ್ ಬೇಪಾರಿ (23) ಬಂಧಿತ ಆರೋಪಿಗಳಾಗಿದ್ದಾರೆ. ಜಾನುವಾರುಗಳು ಸೇರಿದಂತೆ ವಾಹನದ ಮೌಲ್ಯ ಒಂದೂವರೆ ಲಕ್ಷ ಎಂದು ಅಂದಾಜಿಸಲಾಗಿದೆ.

RELATED ARTICLES  ಕಾರವಾರ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗೆ ವಿದ್ಯಾರ್ಥಿಗಳ ಆಯ್ಕೆ: ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜು ವಿದ್ಯಾರ್ಥಿಗಳ ಸಾಧನೆ.

ಬಂಧಿತ ಆರೋಪಿಗಳ ವಿರುದ್ಧ ಕರ್ನಾಟಕ ಗೋವಧೆ ಪ್ರತಿಬಂಧಕ ಅಧಿನಿಯಮ ಹಾಗೂ ಪ್ರಾಣಿ ಹಿಂಸೆ ನಿರ್ಮೂಲನಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.